ಯಕ್ಷಜನ ಸಭಾ ನೇತೃತ್ವದಲ್ಲಿ ಯಕ್ಷೋತ್ಸವ: ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡರಿಗೆ ಸನ್ಮಾನ

ಉಜಿರೆ: ಶ್ರೀ ಜನಾರ್ದನ ದೇವಸ್ಥಾನ ಆಶ್ರಯದಲ್ಲಿ ಉಜಿರೆ ಯಕ್ಷಜನ ಸಭಾ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ “ಯಕ್ಷೋತ್ಸವ -2021 “ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ  ಡಿ. 29  ರಂದು  ಜರುಗಿತು.

ಯಕ್ಷಜನ ಸಭಾ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 56  ವರ್ಷಗಳ ಸುದೀರ್ಘ ಯಕ್ಷಗಾನ ಕಲಾಸೇವೆ ನಡೆಸಿದ ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡರನ್ನು ಜಂಟಿ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಲೆ ಒಬ್ಬನಿಗೆ ಮಾರಿದ್ದಲ್ಲ. ಕಲಾಮಾತೆ ಬಂಜೆಯಲ್ಲ. ಕಲಾಮಾತೆ ಹತ್ತಾರು ಸಂಸ್ಥೆಗಳನ್ನು ಹುಟ್ಟು ಹಾಕುತ್ತಾಳೆ. ಸಂಸ್ಥೆಗಳೇ ಕಲಾವಿದರಿಗೆ ಆಶ್ರಯತಾಣವಾಗಿ ಕಲಾವಿದರನ್ನು ಗುರುತಿಸಿ, ಬೆಳಕಿಗೆ ತರುವಂತಾಗಬೇಕು. ನನಗೆ ನೂರಾರು ಪ್ರಶಸ್ತಿ ಸನ್ಮಾನಗಳು ನಡೆದಿದ್ದರೂ ಬೆಳ್ತಂಗಡಿ ತಾಲೂಕಿನ ಮನೆ ಸನ್ಮಾನ  ನನ್ನ ಭಾಗ್ಯದ ಸುದಿನ. ಜ್ಞಾನಿಗಳು ,ಮೇಧಾವಿಗಳು , ಸಜ್ಜನರ  ಸಮಕ್ಷಮ ನಡೆದ ಸನ್ಮಾನ ರಾಷ್ಟ್ರಪ್ರಶಸ್ತಿಗಿಂತ ಮಿಗಿಲಾದುದು ಎಂದರು.

ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಬಿ.ಭುಜಬಲಿ, ಸೌತಡ್ಕ ಸೇವಾಧಾಮದ ಸಂಚಾಲಕ ಪುರಂದರ ರಾವ್, ಧರ್ಮಸ್ಥಳದ ಗಿರೀಶ್ ಕುದ್ರೆಂತಾಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ  ಡಾ| ಶ್ರೀಧರ ಭಟ್ ಸ್ವಾಗತಿಸಿ,ನಿರೂಪಿಸಿ ,ವಂದಿಸಿದರು. ಕಾರ್ಯದರ್ಶಿ ವೆಂಕಟ್ರಮಣ ರಾವ್ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.