ದೊಂಡೋಲೆಯಲ್ಲಿ ದೇವಸ್ಥಾನಕ್ಕೆ ಜ.15ರಂದು ಶಿಲಾನ್ಯಾಸ-ಪೂರ್ವಬಾವಿ ಸಭೆ

ದೊಂಡೋಲೆ:ಇಲ್ಲಿನ ಇತಿಹಾಸ ಪ್ರಸಿದ್ಧ ಪರಶುರಾಮ ದೇವಾಲಯಕ್ಕೆ ಜನವರಿ 15ರಂದು ಶಿಲಾನ್ಯಾಸ ಕಾರ್ಯ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ. ಈ ಕುರಿತು ದೊಂಡೋಲೆಯ ಪರಶುರಾಮ ದೇವರ ಬಾಲಾಲಯದ ಮುಂದೆ ಪೂರ್ವಬಾವಿ ಸಭೆಯನ್ನು ದೊಂಡೋಲೆ ಗ್ರಾಮಸ್ಥರು ನಡೆಸಿದರು.

ಪರಶುರಾಮನ ಐತಿಹ್ಯವಿರುವ ಮಣ್ಣಿನಲ್ಲಿ ದೇವಾಲಯ ನಿರ್ಮಿಸಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದರೆ ಕೊರೊನಾದಿಂದಾಗಿ ಕುಂಟಿತಕೊಂಡಿದ್ದ ಕೆಲಸ ಕಾರ್ಯ ಈಗ ಚುರುಕು ಪಡೆದಿದ್ದು ಡಿ. 26ರಂದು ಶ್ರಮದಾನ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಜೊತೆಗೆ ಜ. 15ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮದ ರೂಪುರೇಷೆ, ಜೊತೆಗೆ ದೇವಸ್ಥಾನ ನಿರ್ಮಾಣದ ವೇಳೆ ನಡೆಸಬೇಕಾದ ಕೆಲ ಕೆಲಸಗಳಿಗೆ ಕೆಲವರಿಗೆ ಜವಾಬ್ದಾರಿಗಳನ್ನಾಗಿ ನೀಡಿ ಹಂಚಿಕೆ ಮಾಡಲಾಯಿತು.
ದೊಂಡೋಲೆ ಮನೆಯ ಹಿರಿಯರಾದ ಚಾರ್ಮಾಡಿ ಅನಂತ್ ರಾವ್, ಪುರಂದರ ರಾವ್ ದೊಂಡೋಲೆ, ಗೌರವಾಧ್ಯಕ್ಷರಾದ ಸತ್ಯಪ್ರಿಯ ಕಲ್ಲೂರಾಯ, ಧಾರ್ಮಿಕ ಮಾರ್ಗದರ್ಶಕ ರವಿಭಟ್ ಪಜಿರಡ್ಕ, ದೊಂಡೋಲೆ ಮನೆಯ ಸೂರ್ಯನಾರಾಯಣ ರಾವ್, ಜಯಪ್ರಕಾಶ್, ಶ್ರೀನಿವಾಸ್ ಭಟ್, ದಿವಾಕರ್ ಗೌಡ, ಅಚ್ಯುತ ಆಚಾರ್ಯ, ಕಮಲಾಕ್ಷ ಆಚಾರ್ಯ, ರಘು ಪೂಜಾರಿ, ಅಂಗನವಾಡಿ ಟೀಚರ್ ಸುಮಿತ್ರ, ಭಾರತಿ ಗಣೇಶ್,ಸಂಧ್ಯಾ ಎಸ್ ಭಟ್, ಸೀತಾ ದೀವಾಕರ್ ಗೌಡ, ಸುಮಿತ್ರಾ ಸುಧಾಕರ್, ಗೀತಾ ಆಚಾರ್ಯ, ಗಾಯತ್ರಿ ಸೂರ್ಯನಾರಾಯಣ ರಾವ್, ಕಮಲ, ಮಂಜುಳಾ ಉಮೇಶ್, ಮೀನಾಕ್ಷಿ, ಭವ್ಯ, ಶ್ರೀದೇವಿ, ಕಿರಣ್, ಅರುಣ್, ಮಹೇಂದ್ರ, ಪ್ರತಿಕ್, ಮುಂತಾದವರು ಭಾಗಿಯಾಗಿ, ದೇವಸ್ಥಾನದ ಶಿಲಾನ್ಯಾಸದ ಬಗ್ಗೆ ಚರ್ಚಿಸಿದರು.

Advt_NewsUnder_2

About The Author

Related posts

1 Comment

  1. Kedla Purandara Rao

    Thanks
    Suddi news for covering the developments.
    Every one connected with Shri.Parashurama Temple come to know of the developments.

    Reply

Leave a Reply

Your email address will not be published. Required fields are marked *

Copy Protected by Chetan's WP-Copyprotect.