ಕಡಿರುದ್ಯಾವರದಲ್ಲಿ ಮೊಸಳೆ ಪತ್ತೆ:ರಕ್ಷಣಾ ಕಾರ್ಯ

ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಿವೃತ್ತ ಯೋಧ ಸದಾಶಿವ ಎಂಬವರ ರಬ್ಬರ್ ತೋಟದಲ್ಲಿ ಸುಮಾರು 8 ಅಡಿ ಉದ್ದದ ಐದರಿಂದ ಆರು ವರ್ಷ ಪ್ರಾಯದ ಮೊಸಳೆ ಡಿ. 5 ರಂದು ಬೆಳಿಗ್ಗೆ 11 ಗಂಟೆಗೆ ಕಂಡು ಬಂದಿದೆ.
ಇಲ್ಲಿನ ಸಂತೋಷ್ ಎಂಬುವವರು ರಬ್ಬರ್ ತೋಟದಲ್ಲಿ ಕೆಲಸ ನಿರ್ವಹಿಸುವ ವೇಳೆ ಮೊಸಳೆ ಪತ್ತೆಯಾಗಿದೆ. ಈ ವಿಚಾರವನ್ನು ಕಡಿರುದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕುಮಾರ್ ಅವರಿಗೆ ತಿಳಿಸಿದ್ದು ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ಇಲಾಖೆಯ ಸಿಬ್ಬಂದಿಗಳು ತಕ್ಷಣ ಆಗಮಿಸಿ ಸ್ಥಳಿಯರ ಸಹಕಾರದಲ್ಲಿ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ರಕ್ಷಣಾ ಕಾರ್ಯಾಚರಣೆ

ಅರಣ್ಯ ಇಲಾಖೆಯ ಬೆಳ್ತಂಗಡಿ ಕಚೇರಿಯಿಂದ ಬಲೆ, ಗೂಡು,ಇತರ ಅಗತ್ಯ ಸಲಕರಣೆ ಹಾಗೂ ಮೊಸಳೆಗೆ ಬೇಕಾದ ಆಹಾರವನ್ನು ತರಿಸಿ, ‘ವೈ’ ಆಕಾರದ ಮರದ ಬಡಿಗೆಗಳಿಂದ ಮೊಸಳೆಯ ಬಾಯಿ, ಬಾಲ ಹಾಗೂ ಶರೀರದ ಭಾಗವನ್ನು ಒತ್ತಿ ಹಿಡಿದು, ಉಸಿರಾಟಕ್ಕೆ ತೊಂದರೆಯಾಗದಂತೆ ಬಾಯಿಯನ್ನು ಬಿಗಿದು ಮೊಸಳೆಯನ್ನು ಬಲೆಯಲ್ಲಿ ಬಂಧಿಸಲಾಯಿತು. ಪಶುವೈದ್ಯಾಧಿಕಾರಿಗಳಿಂದ ಮೊಸಳೆಯ ಆರೋಗ್ಯ ತಪಾಸಣೆ ನಡೆಸಿ,ರಕ್ಷಿತಾರಣ್ಯದ ಜನವಸತಿಯಿಲ್ಲದ, ನೀರು ಹಾಗೂ ದಟ್ಟ ಅರಣ್ಯ ಇರುವ ಭಾಗದಲ್ಲಿ ಬಿಡಲಾಯಿತು.ಜಿಲ್ಲಾ ಅರಣ್ಯಾಧಿಕಾರಿ ಡಾ.ದಿನೇಶ್ ಕುಮಾರ್ ಅವರ ಮಾರ್ಗದರ್ಶನದೊಂದಿಗೆ,ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನಿರ್ದೇಶನ ನೀಡಿದ್ದು,
ತಾಲೂಕಿನ ನಾನಾ ಶಾಖೆಗಳ ಉಪ ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ಅಂಕಲಗಿ, ಹರಿಪ್ರಸಾದ್,ಭವಾನಿ ಶಂಕರ ಬಿ.ಜಿ,ಅರಣ್ಯ ರಕ್ಷಕರಾದ ಪಾಂಡುರಂಗ ಕಮತಿ,ರಾಘವೇಂದ್ರ ಪ್ರಸಾದ್,ಗಫೂರ್, ವಾಸು ಇವರ ತಂಡ ಸ್ಥಳೀಯರಾದ ರಮೇಶ,ಬಾಬು, ವಿನಾಯಕ, ನಾರಾಯಣ, ಗುರುರಾಜ,ಜಗದೀಶ್ ಮುಂಡಾಜೆ ಸೇರಿದಂತೆ ಅನೇಕರ ಸಹಕಾರದಲ್ಲಿ ಸುಮಾರು ಒಂದೂವರೆ ತಾಸು ಕಾರ್ಯಾಚರಣೆ ನಡೆಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.