ಕುಕ್ಕಳ ಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಹಾಗೂ ಅಭಿನಂದನಾ ಕಾರ್ಯಕ್ರಮ

ಕುಕ್ಕಳ ಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ಮತ್ತು ಅಂಗನವಾಡಿ ಶಿಕ್ಷಕಿ ಯಾಗಿ ಬಡ್ತಿ ಹೊಂದಿದ ಶ್ರೀಮತಿ ಸುಮಿತ್ರಾ ಇವರಿಗೆ ಅಭಿನಂದನಾ ಕಾರ್ಯಕ್ರಮ ಡಿ. 4ರಂದು ಜರಗಿತು.

ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಶೆಟ್ಟಿ ಪದೆಂಜಿಲ ಇವರು ವಹಿಸಿಕೊಂಡಿದ್ದರು. ಹಾಗು ಮುಖ್ಯ ಅತಿಥಿಗಳಾಗಿ ತಾಲೂಕ್ ಅಂಗನವಾಡಿ ವಲಯ ಮೇಲ್ವಿಚಾರಕರದ ಶ್ರೀಮತಿ ನಾಗವೇಣಿ, ಗ್ರಾಮ ಪಂಚಾಯತ್ಅಧ್ಯಕ್ಷರಾದ ಶ್ರೀಮತಿ ಶಶಿಪ್ರಭಾ, ಉಪಾಧ್ಯಕ್ಷರಾದ ಶ್ರೀಮತಿ ಸಂಗೀತಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ ಸುವರ್ಣ ಅಲೆಕ್ಕಿ ಮತ್ತು ಜೆ ಸಿ ಐ ಅಧ್ಯಕ್ಷ ಜೆ ಸಿ ಪ್ರಸನ್ನ ಶೆಟ್ಟಿ, ಮತ್ತು ವಿವಿಧ ಅಂಗನವಾಡಿಯ ಶಿಕ್ಷಕಿಯರು ಭಾಗವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಪುಷ್ಪಾವತಿ ಯವರು ಸ್ವಾಗತಿಸಿ ಪ್ರಸ್ತಾವಿಕ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಅಂಗನವಾಡಿ ಸಹಾಯಕಿ ಆಗಿದ್ದ, ಪ್ರಸ್ತುತ ಪಾರೆಂಕಿ ಅಂಗನವಾಡಿ ಶಿಕ್ಷಕಿಯಾಗಿ ಬಡ್ತಿ ಹೊಂದಿರುವ ಶ್ರೀಮತಿ ಸುಮಿತ್ರ ಅವರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. ಜೆ ಸಿ ಐ ಸದಸ್ಯರು ಹಾಗೂ ಸ್ಥಳಿಯ ಹಲೆಕ್ಕಿ ಫ್ರೆಂಡ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಸಹಕರಿಸಿದರು.ಶ್ರೀಮತಿ ಪುಷ್ಪವತಿ ಕಾರ್ಯಕ್ರಮ ನಿರೂಪಿಸಿದರು. ಬಹುಮಾನ ವಿತರಣೆ ನಂತರ ಯಶೋದರ್ ಇವರು ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.