ಬಳಂಜ: ಇಲ್ಲಿನ ಯುವ ಉದ್ಯಮಿ ಹೇವ ಪ್ರಶಾಂತ್ (40ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಡಿ.5) ರಂದು ಬೆಳಗ್ಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲ ದಿನಗಳ ಹಿಂದೆ ವಾಂತಿಯಾಗಿ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೋಮ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸಿದೆ ನಿಧನರಾದರು.
ಮೃತರು ಅಳದಂಗಡಿಯಲ್ಲಿ ಎಲೆಕ್ಟ್ರಿಕ್ ಉದ್ಯಮ ನಡೆಸುತ್ತಿದ್ದು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಬಳಂಜ ಬಿಲ್ಲವ ಸಂಘದ ಸದಸ್ಯರಾಗಿ, ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಲಬ್ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಬಳಂಜ ಗ್ರಾ.ಪಂ ಸದಸ್ಯೆ ಸುಚಿತ್ರಾ, 2 ಮಕ್ಕಳಾದ ಸಾಕ್ಷತ್, ಸಮೃದ್ದಿ, ತಂದೆ ಕೊರಗಪ್ಪ ಪೂಜಾರಿ,ತಾಯಿ ಕುಸುಮಾವತಿ, ಸಹೋದರಿಯರಾದ ಧನವತಿ, ಸುಜಾತ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.