ಶ್ರೀ ಶಿಶಿಲೇಶ್ವರ ದೇವಸ್ಥಾನದ ಗರ್ಭಗುಡಿಯ ಮಹಾದ್ವಾರಕ್ಕೆ ಹಿತ್ತಾಳೆ ಕವಚ ಸಮರ್ಪಣೆ

ಶಿಶಿಲ: ಮತ್ಸ್ಯ ತೀರ್ಥವೆಂದೇ ಪ್ರಸಿದ್ದಿ ಪಡೆದ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನದ ಗರ್ಭಗುಡಿಯ ಮಹಾದ್ವಾರಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯರವರ ಮನೆಯವರು ಹಾಗೂ ಬಂಧುವರ್ಗದವರ ವತಿಯಿಂದ ಹಿತ್ತಾಳೆಯ ನೂತನ ಕವಚವನ್ನು  ಸಮರ್ಪಿಸಲಾಯಿತು.

ಡಿ.3 ರಂದು ನಡೆದ ಶ್ರೀ ಶಿಶಿಲೇಶ್ವರ ದೇವರ ದೀಪೋತ್ಸವದ ಸಂದರ್ಭದಲ್ಲಿ, ಕೆಮ್ಮಿಂಜೆ ನಾಗೇಶ ತಂತ್ರಿಗಳ ಸಮ್ಮುಖದಲ್ಲಿ ಶ್ರೀ ದೇವರ ಗರ್ಭಗುಡಿಯ ಮಹಾದ್ವಾರಕ್ಕೆ ಹಿತ್ತಾಳೆ ಕವಚವನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಜಯರಾಮ ನೆಲ್ಲಿತ್ತಾಯ ದಂಪತಿ, ಮನೆಯವರು ಹಾಗೂ ಬಂಧುವರ್ಗದವರು, ಪ್ರಧಾನ ಅರ್ಚಕರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.