ನವಚೇತನ ಚಾರಿಟೇಬಲ್ ಟ್ರಸ್ಟ್ ಮತ್ತು ಕನ್ಯಾಡಿ ಸೇವಾ ಭಾರತಿವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ವೇಣೂರು: ಬೆಂಗಳೂರು ರಾಮನಗರದ ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಡ್ ಮತ್ತು ಸೇವಾಭಾರತಿ ಕನ್ಯಾಡಿ ಇವರ ವತಿಯಿಂದ ಉಂಬೆಟ್ಟು, ಬಜಿರೆ, ಗುಂಡೂರಿ, ಆರಂಬೋಡಿ, ವೇಣೂರು, ಸಾವ್ಯ, ಕುತ್ಲೂರು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಬರಹ ಪುಸ್ತಕವನ್ನು ಡಿ. 4ರಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಭಾರತಿ ಕನ್ಯಾಡಿ ಅಧ್ಯಕ್ಷ  ವಿನಾಯಕ ರಾವ್ ಕನ್ಯಾಡಿ, ಕಾರ್ಯದರ್ಶಿ ಕೃಷ್ಣಪ್ಪ ಗುಡಿಗಾರ್, ನವಚೇತನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೆ. ಎಸ್. ಮಂಜುನಾಥ, ಟ್ರಸ್ಟ್ ಸದಸ್ಯ ವಿಜಯ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ, ಸೇವಾ ಭಾರತಿ ಮೂಡುಕೋಡಿ ಗ್ರಾಮ ಸಮಿತಿ ಸಂಯೋಜಕ, ವೇಣೂರು ಗ್ರಾಮ ಪಂಚಾಯತು ಸದಸ್ಯರಗಳಾದ ಹರೀಶ್ ಪಿ. ಯಸ್, ಅನೂಪ್ ಜೆ. ಪಾಯಸ್, ಶಾಲಾ ಹಳೆ ವಿದ್ಯಾರ್ಥಿ ಸುದೀಪ್ ಉಂಬೆಟ್ಟು, ಹರೀಣ್ ಬಜಿರೆ, ಹೇಮ ಬಜಿರೆ, ಸತೀಶ್ ಪೂಜಾರಿ ಆರಂಬೋಡಿ, ಹರೀಶ್ ಹೆಗ್ಡೆ ಸಾವ್ಯ, ರಾಮಚಂದ್ರ ಭಟ್ ಕುತ್ಲೂರು ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.