ಕಣಿಯೂರು ಬಿಜೆಪಿ ಮಹಾಶಕ್ತಿ ಶಕ್ತಿ ಕೇಂದ್ರದ ವತಿಯಿಂದ ಅಶಕ್ತ ಬಡಕುಟುಂಬಗಳಿಗೆ ಆರ್ಥಿಕ ನೆರವು

ಬಾರ್ಯ: ಕಣಿಯೂರು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಇತ್ತೀಚೆಗೆ ನಿಧನರಾದ ಬಾರ್ಯ ಗ್ರಾಮದ ದಿ| ಡೀಕಯ್ಯ ಗೌಡ ಅಜಿರ ರವರ ಮನೆಯವರಿಗೆ ರೂ.25000 ಸಹಾಯಧನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಚೇತನ್ ಪಿಲಿಗೂಡುರವರ ಚಿಕ್ಕಪ್ಪ ಚಂದ್ರ ಪೂಜಾರಿ ಪಿಲಿಗೂಡುರವರು ಅಸೌಖ್ಯದಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಶಾಸಕರ ಸ್ವಂತ ನಿಧಿಯಿಂದ ನೀಡಲಾದ ರೂ.13000/- ಧನಸಹಾಯವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕಣಿಯೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ಜಯಾನಂದ ಕಲ್ಲಾಪು, ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಸನ್ನ ಗೌಡ. ಎನ್, ಬಾರ್ಯ ಗ್ರಾ.ಪಂ. ಸದಸ್ಯರಾದ ಧರ್ಣಪ್ಪ ಗೌಡ ಪಿಲಿಗೂಡು, ಜಯಶ್ರೀ ಅಜಿರ,  ಪವಿತ್ರ ಶೆಟ್ಟಿ ಬನ್ನೆಂಗಳ , ಬಾರ್ಯ ಸಹಕಾರಿ ಸಂಘದ ನಿರ್ದೇಶಕರಾದ ರಾಜೇಶ್ ರೈ ಹೆನ್ನಡ್ಕ, ಕಿರಣ್ ಆನೆಪಲ್ಲ, ಯುವಮೋರ್ಚಾ ಕಾರ್ಯದರ್ಶಿ ಪ್ರಕಾಶ್ ಮುಜ್ಜಳೆ, ಬೂತ್ ಸಮಿತಿ ಅಧ್ಯಕ್ಷರಾದ ರಾಮಣ್ಣ ಗೌಡ ಕುರುಡಂಗೆ, ವಸಂತ ಮಜುಕುಡೆ, ಸುರೇಶ್ ಕಲ್ಲೇರಿ ಗುಡ್ಡೆ, ಕಾರ್ಯದರ್ಶಿಗಳಾದ ಅರುಣಾ ಬಜೆಕಳ, ಶ್ರೀಧರ್ ಪೆಲಾತ್ತಾಜೆ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.