ಉಜಿರೆ ಶ್ರೀ ಧ.ಮಂ. ಸೆಕೆಂಡರಿ ಶಾಲೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮೂಲಕ ಚುನಾವಣೆ

ಉಜಿರೆ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಡಿ.4ರಂದು ವಿದ್ಯುನ್ಮಾನ ಮತಯಂತ್ರದ ಮೂಲಕ  ಚುನಾವಣೆ ನಡೆಯಿತು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಟ್ಟು 8ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ವಿದ್ಯುನ್ಮಾನ ಮತಯಂತ್ರದ ಮುಲಕ ನಡೆದ ಚುನಾವಣಾ ಪ್ರಕ್ರಿಯೆಯು ಬಹಳ ಆಕರ್ಷಣೀಯವಾಗಿತ್ತು

ಉಜಿರೆ ಎಸ್.ಡಿ.ಎಂ. ಡಿಪ್ಲೊಮಾ ಕಾಲೇಜು ಪ್ರಾಧ್ಯಾಪಕ ನಿಕಿತ್ ಜೈನ್ ರವರು ಈ ಮತಯಂತ್ರವನ್ನು ತಯಾರಿಸಿ ಸಿದ್ದಪಡಿಸಿದ್ದು, ಇದರ ವೆಚ್ಚ ಸುಮಾರು 5ಸಾವಿರದಿಂದ 7ಸಾವಿರದವರೆಗೆ ತಗುಲಿದೆ ಎಂದು ತಿಳಿಸಿದರು.

ಎಸ್.ಡಿ. ಎಂ. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ. ಸೋಮಶೇಖರ್ ಶೆಟ್ಟಿ ಯವರು ಮಾತನಾಡಿ ಕಾಗದ ವೆಚ್ಚವಿಲ್ಲದೆ, ಪರಿಸರ ನಾಶವನ್ನು ವಿದ್ಯುನ್ಮಾನ ಯಂತ್ರ ತಡೆಯುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕ ಸದಾಶಿವ ಪೂಜಾರಿ, ರತ್ನಮಾನಸದ ಪಾಲನಾಧಿಕಾರಿ ಯತೀಶ್ , ಶಾಲಾ ಶಿಕ್ಷಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.