ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾದ್ವಾರದ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಭಕ್ತರ ಆರೋಗ್ಯ ಕಾಳಜಿಗಾಗಿ ಆರೋಗ್ಯ ಶಿಬಿರಗಳು ಅಗತ್ಯ: ಡಿ. ಹರ್ಷೇಂದ್ರ ಕುಮಾರ್‌

ಧರ್ಮಸ್ಥಳ: ಸಿನರ್ಜಿ ಇನ್ಸೂರೆನ್ಸ್ ಬ್ರೋಕರ್ಸ್ ಮುಂಬಯಿ, ಎಡಲ್‌ವೈಸ್ ಗಾಲಿಗರ್ ಇನ್ಸೂರೆನ್ಸ್ ಬ್ರೋಕರ್ಸ್ ಮುಂಬಯಿ ಇವರ ಸಹಕಾರದೊಂದಿಗೆ  ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾದ್ವಾರದ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರವರು ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,  ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಚ್ಛತೆಗೆ ಆದ್ಯತೆಯನ್ನು ನೀಡಿದೆ. ಇಲ್ಲಿ ಬರುವ ಯಾತ್ರಾರ್ಥಿಗಳ ಆರೋಗ್ಯದ ಕಡೆಯೂ ಗಮನವನ್ನು ಹರಿಸಲಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಭಕ್ತರು ಅನಾರೋಗ್ಯ ತೊಂದರೆಗೊಳಗಾದಾಗ ಅವರಿಗೆ ಆರೋಗ್ಯ ಶಿಬಿರಗಳ ಮೂಲಕ ವಿಶೇಷ ಕಾಳಜಿಯನ್ನು ನೀಡಬೇಕೆಂಬ ಉದ್ದೇಶದಿಂದ ಈ  ಆರೋಗ್ಯ ಶಿಬಿರವನ್ನು  ಆಯೋಜಿಸಲಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೀಪೋತ್ಸವದ ಸಂದರ್ಭದಲ್ಲಿ ಬರುವ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಕೊರೊನಾ ಜಾಗೃತಿ ಮಾಹಿತಿ, ಮುಂತಾದ ಕಾರ್ಯಕ್ರಮ ನಡೆಸಲಾಗುತ್ತಿದೆ. ಆರೋಗ್ಯ ಶಿಬಿರಕ್ಕೆ ವೈದ್ಯಾಧಿಕಾರಿಗಳ, ಸಹಾಯಕರ ಸೂಕ್ತ ವ್ಯವಸ್ಥೆಯನ್ನು ಹೆಲ್ತ್ ಇಂಡಿಯಾ ಕಂಪೆನಿ ಮುಂಬಯಿ ಇವರು ಒದಗಿಸಿಕೊಡುತ್ತಿದ್ದಾರೆ ಎಂದರು.

ಕರ್ಯಕ್ರಮದಲ್ಲಿ ಶ್ರೇಯಸ್‌ ಕುಮಾರ್, ಹೆಲ್ತ್‌ ಇಂಡಿಯಾ ಜೆ.ಪಿ.ಎ ಉಪಾಧ್ಯಕ್ಷ ಬಿ.ಸಿ ಆಲೆಕ್ಸ್, ಹೆಲ್ತ್ ಇಂಡಿಯಾ ಟಿ.ಪಿ.ಎ. ವ್ಯವಸ್ಥಾಪಕ ನಿರ್ದೇಶಕ ಕಮಲ್‌ಜೀತ್ ಗುಪ್ತ,  ಎಡಲ್ ವೈಸ್ ಉಪಾಧ್ಯಕ್ಷೆ ಲತಾ ಮತ್ತು ಟಿ.ಪಿ.ಎ ಹೆಲ್ತ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥರು ವಿಶ್ವನಾಥ್, ಪ್ರಬಂಧಕ ವಿಜಯ್,  ಮುಂಬಯಿ ಎಡಲ್‌ವೈಸ್ ಕಂಪೆನಿಯ ಉಮನಾಥ್ ಕಾಮತ್ ,  ಕುಶಾಲಪ್ಪ, ತೇಜಸ್ವಿನಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.