ವಿಧಾನ ಪರಿಷತ್ ಚುನಾವಣೆ: ಧರ್ಮಸ್ಥಳ – ಉಜಿರೆ ನಗರ ಮಹಾಶಕ್ತಿ ಕೇಂದ್ರದ ಪ್ರಚಾರ ಸಭೆ

ಉಜಿರೆ: ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ವಿಧಾನ ಪರಿಷತ್ ಚುನಾವಣೆ  ಹಿನ್ನೆಲೆಯಲ್ಲಿ ಧರ್ಮಸ್ಥಳ – ಉಜಿರೆ ನಗರ ಮಹಾಶಕ್ತಿ ಕೇಂದ್ರದ ಪ್ರಚಾರ ಸಭೆಯ ಡಿ.1 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ  ಜರುಗಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಅಂಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯಾವುದೇ ಅಭಿವೃದ್ಧಿ ಕಾರ್ಯ  ಹಾಗೂ ಕಾರ್ಯಸಾಧನೆಗೆ ಅಧಿಕಾರ ಸಿಗಬೇಕು.  ರಾಜಕೀಯ ವಿರೋಧಿಗಳ ಕುತಂತ್ರಕ್ಕೆ  ಬಿಜೆಪಿ ಅಭ್ಯರ್ಥಿಯನ್ನು  ಪೂರ್ಣ ಮತದಿಂದ ಗೆಲ್ಲಿಸುವ ಮೂಲಕ ಪ್ರತ್ಯುತ್ತರ ನೀಡಬೇಕು. ವಿರೋಧ ಪಕ್ಷಗಳ  ಯಾವುದೇ  ಆಮಿಷ, ಅಪಪ್ರಚಾರಗಳಿಗೆ ಅವಕಾಶ ನೀಡದೆ  ಕೋಟ  ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ  ಗೆಲ್ಲಿಸಿ  ಮತ್ತೆ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ಕಲ್ಪಿಸಿಕೊಡಿ ಎಂದರು

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,  ಶ್ರೀಮಂತರ ಸ್ವತ್ತಾಗಿದ್ದ ಗ್ರಾ.ಪಂ./ತಾ.ಪಂ./ಜಿ.ಪಂ ಸ್ಥಾನಗಳು  ಪ್ರಜಾಪ್ರಭುತ್ವ ವ್ಯವಸ್ಥೆಯ ಮೀಸಲಾತಿಯಲ್ಲಿ ಸ್ಥಳೀಯರ ಆಯ್ಕೆಗೆ  ಅವಕಾಶ ನೀಡಿ ಅಧಿಕಾರ ಸೂತ್ರ ನೀಡಿದೆ.  ಗ್ರಾ.ಪಂ. ಶಕ್ತಿಶಾಲಿಯಾಗಿ ಕೆಲಸ ಮಾಡಲು  ಸರಕಾರದ ಅನುದಾನ ಸಿಗಬೇಕು.  ನರೇಂದ್ರ ಮೋದಿಯವರ  ಕೇಂದ್ರ ಸರಕಾರದಿಂದ ನೇರ ಅನುದಾನ ಗ್ರಾ ಪಂ. ತಲುಪುತ್ತಿದೆ.  “ಒಬ್ಬನೇ ಅಭ್ಯರ್ಥಿ ಒಂದೇ ಮತ ” ಹಿನ್ನೆಲೆಯಲ್ಲಿ  ಪ್ರತಿನಿಧಿಗಳು ಪೂರ್ಣ ಮತ  ನೀಡಿ   ಬೆಂಬಲಿಸಬೇಕೆಂದು  ಮತ ಯಾಚಿಸಿದರು.

ಶಾಸಕ ಹರೀಶ್ ಪೂಂಜ  ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ 522  ಮತಗಳಿದ್ದು,  ಇತರ ಪಕ್ಷಗಳ ಮತಗಳನ್ನು ಸೇರಿಸಿ 622  ಮತ ನೀಡುವ ಮೂಲಕ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಧಿಕ ಮತಗಳಿಂದ  ವಿ.ಪ.ಗೆ ಆಯ್ಕೆಮಾಡಿ ಕ್ಷೇತ್ರದ ಅಭಿವೃದ್ಧಿ ಯೋಜನೆ, ಯೋಚನೆಗಳ  ಅನುಷ್ಠಾನಕ್ಕೆ  ಸಹಕಾರಿಗಳಾಗಬೇಕೆಂದರು.

ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಪ್ರಭಾರಿ ರಾಜೇಶ್ ಪೂಜಾರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು,  ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ರಾಮದಾಸ್ ಬಂಟ್ವಾಳ , ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ , ತಾ.ಪಂ. ಮತ್ತು ಗ್ರಾ. ಪಂ.ಸದಸ್ಯರು, ಹಾಗೂ ಶಕ್ತಿ ಕೇಂದ್ರದ ಸದಸ್ಯರು  ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.