ಬೆಳ್ತಂಗಡ:; ಬೆಳ್ತಂಗಡಿ ವಕೀಲರ ಸಂಘದ ನೂತನ ಪದಾಧಿಕಾರಿಗಳು ವಿಧಾನ ಪರಿಷತ್ ಶಾಸಕ, ಬೆಳ್ತಂಗಡಿ ವಕೀಲರ ಸಂಘದ ಹಿರಿಯ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ರವರನ್ನು ಭೇಟಿ ಮಾಡಿ, ನೂತನ ವಕೀಲರ ಭವನ ನಿರ್ಮಾಣ ಕಾರ್ಯಗಳಿಗೆ ಅನುದಾನ ಒದಗಿಸುವಂತೆ ಬೇಡಿಕೆ ಸಲ್ಲಿಸಿದರು.
ಸಂಘದ ಬೇಡಿಕೆಗೆ ಸ್ಪಂದಿಸಿದ ಶಾಸಕರು ನೂತನ ವಕೀಲರ ಭವನದ ಒಳಗಿನ ಅಗತ್ಯ ಕೆಲಸ ಕಾರ್ಯಗಳಿಗಾಗಿ ರೂ. 10 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅದ್ಯಕ್ಷ ಪ್ರಸಾದ್ ಕೆ.ಎಸ್, ಪ್ರಧಾನ ಕಾರ್ಯದರ್ಶಿ ಶೈಲೇಶ್ ಆರ್ ಠೋಸರ್, ಉಪಾಧ್ಯಕ್ಷ ಗಣೇಶ ಗೌಡ, ಕೋಶಾಧಿಕಾರಿ ಹರಿಪ್ರಕಾಶ್ ಪಿ.ಎನ್, ಜೊತೆ ಕಾರ್ಯದರ್ಶಿ ಪ್ರಿಯಾಂಕ, ಮಾಜಿ ಅದ್ಯಕ್ಷರುಗಳಾದ ಶಿವಕುಮಾರ್ ಎಸ್.ಎಂ, ಸೇವಿಯರ್ ಪಾಲೇಲಿ, ಮಾಜಿ ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್, ಸದಸ್ಯರಾದ ಲತಾ ಮೊದಲಾದವರು ಉಪಸ್ಥಿತರಿದ್ದರು.