ದ.ಕ ಯುವಾ ಬ್ರಿಗೇಡ್ ವತಿಯಿಂದ ಬೆಳ್ತಂಗಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಯುವಾ ಬ್ರಿಗೇಡ್ ವತಿಯಿಂದ ‘ಕೈ ಹಿಡಿದು ನಡೆಸೆನ್ನನು’ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್ ವಿರೂಪಾಕ್ಷಪ್ಪ ರವರು ಪಕ್ಷಿಗಳು ಗೂಡುಗಳನ್ನು ಕಟ್ಟುವಾಗ ಹೇಗೆ ಯೋಜನೆ ಮಾಡುತ್ತದೆಯೋ ಹಾಗೇಯೆ ಮಕ್ಕಳು ಕೂಡ ಪ್ರತಿ ವಿಷಯವನ್ನು ಕಲಿಯುವಾಗ ಯೋಜನೆ ರೂಪಿಸಿಕೊಂಡು ಕಲಿಯಬೇಕು. ಜೊತೆಗೆ ಯುವಾಬ್ರಿಗೇಡ್ ನ ಈ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕ ರಾಜೇಂದ್ರ ಎಮ್, ಮಂಗಳೂರು ಜಿಲ್ಲಾ ಸಂಚಾಲಕರಾದ ಮನೀಷ, ಉದ್ಯಮಿಗಳಾದ ಶಶಿಧರ್ ಪೈ, ಶಾಲಾ‌ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ವಿಸ್ತಾರಕರಾದ ತಿಲಕ್ ಶಿಶಿಲ್, ಶಿಕ್ಷಕ ತಾರಾನಾಥ ಹಾಗೂ ಶಾಲಾ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೂರ್ಣಿಮಾ ಭಟ್ ಸ್ವಾಗತಿಸಿ, ಮಂಗಳೂರು ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾಲತ ಕಾರ್ಯಕ್ರಮ ನಿರೂಪಿಸಿ, ಸೆಫಿಯಾ ಕೆ  ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.