ಉರುವಾಲು ಪದವಿನಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಪದ್ಮುಂಜ: ಇಲ್ಲಿಯ ಉರುವಾಲುಪದವು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡು ಹಗಲೇ ಮನೆಗೆ ನುಗ್ಗಿದ ಕಳ್ಳರು ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಕಳವುಗೈದ ಘಟನೆ ನ. 29ರಂದು ವರದಿಯಾಗಿದೆ.
ಉರುವಾಲು ಪದವು ನಿವಾಸಿ ಹಮೀದ್ ಎಂಬವರು ಅಂದು ಮಧ್ಯಾಹ್ನ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ನೆಲ್ಯಾಡಿಯಲ್ಲಿರುವ ತಮ್ಮ ಮಗಳ ಮನೆಗೆಂದು ಹೋಗಿದ್ದ ಸಂದರ್ಭದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಗೋದ್ರೇಜಿನ ಬೀಗ ಮುರಿದು ನೆಕ್ಲೇಸ್ ಹಾಗೂ ಎರಡು ಉಂಗುರ ಸೇರಿದಂತೆ ಅಂದಾಜು 6 ಪವನ್ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸಂಜೆ ಮನೆಯವರು ಮನೆಗೆ ಮರಳಿ ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹಮೀದ್ ರವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳವಾದ ದಿನದಂದು ಆ ಪರಿಸರದಲ್ಲಿ ಬಿಕ್ಷಾಟನೆ ನಡೆಸುತ್ತಿದ್ದರೆನ್ನಲಾದ ಮೂರು ಮಂದಿ ಗಂಡಸರು, ಆರು ಮಂದಿ ಮಹಿಳೆಯರು, ಎಂಟು ಮಂದಿ ಮಕ್ಕಳನ್ನು ಸಂಶಯದ ಮೇರೆಗೆ ಉಪ್ಪಿನಂಗಡಿ ಠಾಣೆಗೆ ಕರೆಸಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.