ಡಿ.6: ಬೆಳ್ತಂಗಡಿಯಲ್ಲಿ ಸಾಯ ಎಂಟರ್ ಪ್ರೈಸಸ್ ಶುಭಾರಂಭ

ಬೆಳ್ತಂಗಡಿ: ಕಳೆದ 18 ವರ್ಷಗಳ ಹಿಂದೆ ವಿಟ್ಲದಲ್ಲಿ ಆರಂಭಗೊಂಡ ಕೃಷಿಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ ಸಾಯಿ ಎಂಟರ್ಪ್ರೈಸಸ್ ಸಂಸ್ಥೆಯು ಪುತ್ತೂರು, ಮಂಗಳೂರು, ಕಾಸರಗೋಡು, ಮೂಡಬಿದ್ರೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ಕೃಷಿಕರಿಗೆ ಗುಣಮಟ್ಟದ ವಿವಿಧ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಪೂರೈಸಿ ಗ್ರಾಹಕರ ಪ್ರೀತಿ-ವಿಶ್ವಾಸಗಳಿಸಿದೆ.

ಕೃಷಿಕರ ಆರ್ಥಿಕ ಚೇತನಕ್ಕೆ ಪ್ರೋತ್ಸಾಹ ನೀಡುತ್ತಿರುವ, ಕೃಷಿ ಇಲಾಖೆ ಮತ್ತು ತೋಟಗಾರಿಕೆಯ ಮೆಚ್ಚುಗೆಗೆ ಪಾತ್ರರಾಗಿ, ಸರಕಾರದ ಸಬ್ಸಿಡಿಯೊಂದಿಗೆ ನಿಯೋಜನೆಗೊಂಡು, ಸುಳ್ಯ, ಮೂಡಬಿದ್ರೆ, ಮಂಗಳೂರು, ಕಿನ್ನಿಗೋಳಿ, ಕಡಬ, ಕಾಸರಗೋಡು, ಬದಿಯಡ್ಕ, ಉಪ್ಪಳದಲ್ಲಿ ತನ್ನ ಶಾಖೆಯನ್ನು ಹೊಂದಿರುವ ಸಾಯ ಎಂಟರ್ ಪ್ರೈಸಸ್ ಇದೀಗ ಬೆಳ್ತಂಗಡಿ ೧೧ನೇ ಶಾಖೆಯಾಗಿ ಡಿ.6 ರಂದು ಬೆಳ್ತಂಗಡಿಯ ಮಹಾವೀರ ಸರ್ವಿಸ್ ಸ್ಟೇಷನ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ನೂತನವಾಗಿ ಶುಭಾರಂಭಗೊಳ್ಳಲಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ ಸಿಂಹ ನಾಯಕ್‌ರವರ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಉದ್ಘಾಟನೆ ದಿನದಂದು ತಾಲೂಕಿನ ಸಮಸ್ತ ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ಸಂಸ್ಥೆಗೆ ಎಲ್ಲಾ ರೀತಿಯ ಬೆಂಬಲ ನೀಡಿ ಪ್ರೋತ್ಸಾಹಿಸಬೇಕೆಂದು ಮಾಲಕರು ವಿನಂತಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.