ಸಂತೆಕಟ್ಟೆಯ ಐಡಿಯಲ್ ಕಾಂಪ್ಲೆಕ್ಸ್ ನಲ್ಲಿ ಪಪ್ಪು ಪ್ರೊ ಸೇಲ್ಸ್ & ಸರ್ವಿಸ್ ಶುಭಾರಂಭ

ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ಬಳಿಯ ಐಡಿಯಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪಪ್ಪು ಪ್ರೋ ಸೆಲ್ಸ್ &  ಸರ್ವಿಸ್  ಡಿ. 1ರಂದು ಶುಭಾರಂಭಗೊಂಡಿತು. ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ  ಮಹೇಶ್ ಶೆಟ್ಟಿ ತಿಮರೋಡಿ, ಬೆಳ್ತಂಗಡಿ ಸಬ್ ಇನ್ಸ್ ಪೆಕ್ಟರ್  ನಂದಕುಮಾರ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿ ನ್ಯಾಯವಾದಿ ಎಲೋಸಿಯಸ್ ಎಸ್ ಲೋಬೊ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಸಹಾಯಕ ವ್ಯವಸ್ಥಾಪಕ ಮಹೇಶ್ ಕುಮಾರ್, ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ  ಸುನಿಲ್ ಲೋಬೊ, ಬೆಳ್ತಂಗಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶಂಕರ ಹೆಗ್ಡೆ, ಮಾಜಿ ಸೈನಿಕರಾದ ಮೊಹಮ್ಮದ್ ರಫಿ, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ, ದಲಿತ ಸಂಘರ್ಷ ಸಮಿತಿಯ ವಸಂತ ಬಿ.ಕೆ, ಐಡಿಯಲ್ ಕಾಂಪ್ಲೆಕ್ಸ್ ಮಾಲಕರಾದ ಎನ್.ಎ. ಉಸ್ಮಾನ್, ಮಹಾವೀರ ಬ್ಯಾಟರಿ ಮಾಲಕ ವಸಂತ ರಾಜ್ ಜೈನ್, ಸಿಟಿ ಎಲೆಕ್ಟ್ರಾನಿಕ್ಸ್ ಮಾಲಕ ಪ್ರದೀಪ್ ಗುರುವಾಯನಕೆರೆ, ನ್ಯೂಸಿಟಿ ಎಲೆಕ್ಟ್ರಿಕ್ ಮಾಲಕ  ಲೋಕೇಶ್ ಕುಲಾಲ್, ಮೊದಲಾದ ಗಣ್ಯರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅತಿಥಿ ಗಣ್ಯರನ್ನು ಪಪ್ಪು ಪ್ರೋ ಸೆಲ್ಸ್ &  ಸರ್ವಿಸ್ ಸಂಸ್ಥೆಯ ಮಾಲಕರಾದ ಮಹಮ್ಮದ್ ಶಬೀರ್, ಸಹೋದರರಾದ ಮಹಮ್ಮದ್ ಶಮೀರ್, ಮಹಮ್ಮದ್ ಶರೀಫ್ ಸ್ವಾಗತಿಸಿ, ಸರ್ವರ ಸಹಕಾರ ಕೋರಿದರು.

ಸೌಂಡ್ಸ್ ಮತ್ತು ಲೈಟಿಂಗ್ಸ್, ಮಿನಿಚರ್ಸ್, ಡಿಜೆ ಸೆಟ್ ಅಪ್, ಮೈಕ್, ಎಲ್ ಇ.ಡಿ ಐಟಮ್ಸ್, ಎಲ್ ಇ ಡಿ ವಾಲ್, ಫ್ಯಾನ್ಸಿ ಲೈಟ್, ಆಂಪ್ ಮಿಕ್ಸರ್ ಸೇಲ್ಸ್ & ಸರ್ವಿಸ್ ಹಾಗೂ ಇನ್ನಿತರ ಎಲೆಕ್ಟ್ರಿಕಲ್ಸ್ ಉಪಕರಣಗಳನ್ನು ರಿಪೇರಿ ಮಾಡಿಕೊಡಲಾಗುವುದು. ಧಾರ್ಮಿಕ ಹಾಗೂ ಸರಕಾರಿ ಕಛೇರಿಗಳಿಗೆ ಧ್ವನಿವರ್ಧಕ ಗಳನ್ನು ಅಳವಡಿಸಿಕೊಡಲಾಗುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.