ಮಾರಕ ಖಾಯಿಲೆಯಿಂದ ಬಳಲುತ್ತಿರುವ ವಿದ್ಯಾರ್ಥಿ ಓಡಿಲ್ನಾಳದ ಸುಪ್ರೀತ್ ಚಿಕಿತ್ಸೆಗೆ ನೆರವಾಗಿ

ಓಡಿಲ್ನಾಳ: ಇನ್ನೂ ಆಟ, ಪಾಠದಲ್ಲಿ ಮಗ್ನನಾಗಿ ಭವಿಷ್ಯದ ಕಲ್ಪನೆಯಲ್ಲಿ ಕನಸು ಹೊತ್ತಿರುವ 8ನೇ ತರಗತಿಯ ವಿದ್ಯಾರ್ಥಿಯೋರ್ವರು ಮಾರಕ ಖಾಯಿಲೆಯಿಂದ ಬಳಲುತ್ತಿದ್ದು, ಆತನ ಜೀವವನ್ನು ಉಳಿಸುವುದಕ್ಕಾಗಿ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ.
ಓಡಿಲ್ನಾಳ ಗ್ರಾಮದ ಅಶ್ವಥನಗರ ನಿವಾಸಿ ಸುರೇಶ್ ಚೌಟ ಮತ್ತು ಭಾರತಿ ದಂಪತಿ ಪುತ್ರ ಸುಪ್ರಿತ್ ಎಸ್. ಚೌಟ ಎಂಬವರೇ ಕಾಲಿನ ಎಲುಬು ಕ್ಯಾನ್ಸರ್ ಗೆ ತುತ್ತಾದವರು.

ಗೇರುಕಟ್ಟೆಯ ಕೊರಂಜ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಪ್ರಿತ್ ಎಲ್ಲಾ ಮಕ್ಕಳಂತೆ ಆಟ, ಪಾಠಗಳಲ್ಲಿ ಚುರುಕಾಗಿದ್ದರು. ಲಾಕ್‌ಡೌನ್ ಮುಗಿದು ಇನ್ನೇನು ಶಾಲೆ ಪ್ರಾರಂಭವಾದಾಗ ಸಂತೋಷದಿಂದ ಶಾಲೆಗೆ ಸೈಕಲ್‌ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದಂತೆ ಈತನಿಗೆ ಕಾಲುನೋವು ಕಾಡತೊಡಗಿತು.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವರನ್ನು ಪರೀಕ್ಷೆಗೊಳಪಡಿಸಿದಾಗ ಹೆತ್ತವರಿಗೆ ಆಘಾತಕಾಡಿತ್ತು. ಈ ಬಾಲಕನ ಕಾಲಿನಲ್ಲಿ ಎಲುಬಿನ ಕ್ಯಾನ್ಸರ್ ಪತ್ತೆಯಾಗಿದ್ದು, ಕಳೆದ ಎರಡು ತಿಂಗಳಿನಿಂದ ಪ್ರಾಥಮಿಕ ಚಿಕಿತ್ಸೆಗೆ ಸುಮಾರು ಒಂದು ಲಕ್ಷದಷ್ಟು ಹಣ ಖರ್ಚು ಮಾಡಿರುವ ಪೋಷಕರು ಕಂಗಲಾಗಿದ್ದಾರೆ.
ಇನ್ನು ಮುಂದಿನ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆ ಹಾಗೂ ನಂತರ ಚಿಕಿತ್ಸೆಗಳಿಗಾಗಿ ಅಂದಾಜು ರೂ. 13 ಲಕ್ಷದಷ್ಟು ವೆಚ್ಚ ತಗುಲಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ 5 ಸೆನ್ಸ್ ಜಾಗದಲ್ಲಿ ಮನೆ ಮಾಡಿಕೊಂಡು, ಮಂಗಳೂರಿನ ಹೊಟೇಲ್‌ನಲ್ಲಿ ದುಡಿಯುತ್ತಿರುವ ಸುರೇಶ್ ಚೌಟ ಮತ್ತು ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿರುವ ಭಾರತಿ ದಂಪತಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಕಾಲೇಜು ವ್ಯಾಸಾಂಗ ಮಾಡುತ್ತಿದ್ದು, ಅವರಿಗೆ ಜೀವನ ನಿರ್ವಹಣೆಯೇ ಒಂದು ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಮಗನ ಆರೋಗ್ಯ ಕಂಗೆಡುವಂತೆ ಮಾಡಿದೆ.
ಲಾಕ್‌ಡೌನ್ ನಂತರ ಸರಿಯಾಗಿ ಕೆಲಸವಿಲ್ಲದೆ ಒತ್ತಡದಲ್ಲಿದ್ದ ಸುರೇಶ್ ಚೌಟ ಅವರು ಮಗನ ಚಿಕಿತ್ಸೆಗೆ ದುಡ್ಡು ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಸುಪ್ರೀತ್‌ನ ಭವಿಷ್ಯದ ದೃಷ್ಟಿಯಿಂದ ಇನ್ನು 20 ದಿನದೊಳಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ.

ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕಾದ ಬಾಲಕ ಧಯನೀಯ ಸ್ಥಿತಿಯಲ್ಲಿ ಮಲಗಿದ್ದಾನೆ. ಸುಪ್ರಿತ್ ಮತ್ತೆ ಮೊದಲಿನಂತಾಗಿ ಶಾಲೆಗೆ ಹೋಗಬೇಕಾದರೆ ಸಮಾಜದ ಸಹೃದಯಿ ದಾನಿಗಳ ಸಹಕಾರದ ಅಗತ್ಯವಿದೆ. ದಾನಿಗಳು ತಮ್ಮ ಕೈಲಾದ ಸಹಕಾರವನ್ನು ನೀಡಿದರೆ ತಮ್ಮ ಮಗನಿಗೆ ಚಿಕಿತ್ಸೆ ನೀಡಬಹುದೇನೋ ಎಂಬ ನಿರೀಕ್ಷೆಯಲ್ಲಿರುವ ಪೋಷಕರಿಗೆ ಸಹೃದಯಿ ದಾನಿಗಳು ನೆರವಾಗುವಂತೆ ಈ ಮೂಲಕ ವಿನಂತಿಸಲಾಗಿದೆ.

ಸಹಾಯ ಮಾಡಲಿಚ್ಚಿಸುವ ದಾನಿಗಳು ಖಾತೆದಾರರ ಹೆಸರು: ಸುಪ್ರಿತ್ ಎಸ್ ಚೌಟ, ಕೆನರಾ ಬ್ಯಾಂಕ್ ಕಳಿಯ ಶಾಖೆ, ಖಾತೆಸಂಖ್ಯೆ: 02142200054492, , ಐಎಫ್‌ಎಸ್‌ಸಿ ಕೋಡ್:CNRB0010214 ಅಥವಾ ಫೋನ್ ಪೇ 8088639616 ಸಂಖ್ಯೆಗೆ ಹಣವನ್ನು ಜಮಾ ಮಾಡಬಹುದಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.