ಇಂದಬೆಟ್ಟು ಶಾಲೆಗೆ ಹಳೆ ವಿದ್ಯಾರ್ಥಿನಿಯಿಂದ 25 ಕುರ್ಚಿಗಳ ಕೊಡುಗೆ

ಇಂದಬೆಟ್ಟು: ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿನಿ ಅರ್ಪಣಾ ಶರತ್ ರವರು ನಲಿಕಲಿ ವಿದ್ಯಾರ್ಥಿಗಳಿಗಾಗಿ ಶಾಲೆಗೆ ಕೊಡುಗೆಯಾಗಿ ನೀಡಿರುವ 25 ಕುರ್ಚಿಗಳನ್ನು ಅವರ ಮಾತೃಶ್ರೀಯವರಾದ ರತ್ನಮ್ಮರವರು ಶಾಲಾ ಶಿಕ್ಷಕರು ಮತ್ತು ಮೇಲುಸ್ತುವಾರಿ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಅಡೀಲು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಕೊಪ್ಪದಕೋಡಿ, ಉಪಾಧ್ಯಕ್ಷೆ ಹೇಮಲತಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ರಾಜೇಂದ್ರ ಕುಕ್ಕಿಮಾರ್ ಮುಖ್ಯಶಿಕ್ಷಕಿ ಚಿತ್ರ, ಜೇಸಿಐ ಮಂಜುಶ್ರೀ ಅಧ್ಯಕ್ಷ ಸ್ವರೂಪ್ ಶೇಖರ್, ವಲಯಾಧಿಕಾರಿ ಕಿರಣ್ ಕುಮಾರ್ ಶೆಟಿ, ಪೂರ್ವಾಧ್ಯಕ್ಷರುಗಳಾದ ನಾರಾಯಣ ಶೆಟ್ಟಿ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು .

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.