ಸ್ಪಂದನಾ ಸೇವಾ ಸಂಘದಿಂದ ಉರುವಾಲು ಗ್ರಾಮದ ಶೀನಪ್ಪ ಗೌಡರಿಗೆ ಚಿಕಿತ್ಸಾ ನೆರವು

ಉರುವಾಲು: ಸ್ಪಂದನಾ ಸೇವಾ ಸಂಘದ ೫೮ನೇ ಸೇವಾ ಯೋಜನೆಯಡಿ ಅನಾರೋಗ್ಯದಿಂದ ಬಳಲುತ್ತಿದ್ದು, ತೀವ್ರ ಆರ್ಥಿಕ ಸಂಕಷ್ಟದಲಿರುವ ಉರುವಾಲು ಗ್ರಾಮದ ಮುಗೇರಡ್ಕ ನಿವಾಸಿ ಶೀನಪ್ಪ ಗೌಡ ರವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ರೂ 15,000/-ದ ಚೆಕ್ ವಿತರಿಸಲಾಯಿತು.
ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ ಅಧ್ಯಕ್ಷ ಪದ್ಮ ಗೌಡ ಬೆಳಾಲು ರವರ ಮೂಲಕ ಚಿಕಿತ್ಸಾ ನೆರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿನ ನಿರ್ದೇಶಕರಾದ ಸುರೇಶ್ ಕೌಡಂಗೆ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ, ಸಿದ್ಧಿ ವಿನಾಯಕ ಅಸೋಸಿಯೇಟ್ಸ್‌ನ ಇಂಜಿನಿಯರ್ ಕೇಶವ ಗೌಡ ಬೈಪಾಡಿ, ಸ್ಪಂದನಾ ಸೇವಾ ಸಂಘದ ಸದಸ್ಯರಾದ ಸೀತಾರಾಮ್ ಬೆಳಾಲು, ನಿತಿನ್ ಕಲ್ಮಂಜ, ಕುಸುಮ ಮುಂಡತ್ತೋಡಿ, ಉಮೇಶ್ ಗೌಡ ಮೈರ್ನೋಡಿ, ನಿತೇಶ್ ಗೌಡ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.