ಪದ್ಮುಂಜ: ದನದ ಹಟ್ಟಿಗೆ ಚಿರತೆ ದಾಳಿ; ಎಚ್ಚರಿಸಿದ ಸಾಕುನಾಯಿ-ಪ್ರಾಣಾಪಾಯದಿಂದ ಪಾರಾದ ದನ

ಚಿರತೆಯ ಹೆಜ್ಜೆ ಗುರುತು

ಪದ್ಮುಂಜ: ಇಲ್ಲಿಯ ನೆಕ್ಕಿಲು ನಿವಾಸಿ ಸಾಂತಪ್ಪ ಪೂಜಾರಿಯವರ ದನದ ಹಟ್ಟಿಗೆ ಚಿರತೆಯೊಂದು ದಾಳಿ ಮಾಡಿದ  ಘಟನೆ ನ. 28 ರಂದು ರಾತ್ರಿ ನಡೆದಿದೆ.

ಮನೆಯವರೆಲ್ಲರೂ ರಾತ್ರಿ ಮಲಗಿದ್ದ ವೇಳೆ, ತಮ್ಮ ಸಾಕು ನಾಯಿಯು ಬೊಗಳಿದ ಸದ್ದಿಗೆ ಎದ್ದ ಮನೆಯವರು ಹಟ್ಟಿಗೆ ನುಗ್ಗಿ  ಹಟ್ಟಿಯೊಳಗಿದ್ದ ಹಸುವನ್ನು ಹಿಡಿಯಲು ಯತ್ನಿಸುತ್ತಿರುವ ಚಿರತೆಯನ್ನು ಕಂಡು ಜೋರಾಗಿ ಬೊಬ್ಬೆ ಹೊಡೆದು ಓಡಿಸಲು ಯತ್ನಿಸಿದ್ದರು. ಕೂಡಲೇ ಚಿರತೆಯು ಅಲ್ಲಿಂದ  ಕಾಲ್ಕಿತ್ತಿದ್ದು, ಹಸುವು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದೆ.

ಸಾಂತಪ್ಪ ಪೂಜಾರಿಯವರ ಹಟ್ಟಿಯಲ್ಲಿರುವ ಹಸುಗಳು

ಸೂಕ್ತ ಸಮಯ ಪ್ರಜ್ಞೆಯಿಂದಾಗಿ ಹಸುವಿನ ಪ್ರಾಣಕ್ಕೆ ಆಗಬಹುದಾದಂತಹ ಭಾರೀ ಅಪಾಯವೊಂದು ತಪ್ಪಿದಂತಾಗಿದೆ  ಎಂಬುವುದಾಗಿ ಸಾಂತಪ್ಪ ರವರ ಅಳಿಯ ಬೆಳಾಲಿನ ದಯಾನಂದ ರವರು ಸುದ್ದಿಗೆ ಮಾಹಿತಿ ನೀಡಿದ್ದಾರೆ.

ಹೆಜ್ಜೆ ಗುರುತಿನ ಆಧಾರದ ಮೇಲೆ ಅರಣ್ಯ ಇಲಾಖೆಯವರು ಇದು ಚಿರತೆಯ ಹೆಜ್ಜೆಯೆಂದು ಸಂಶಯ ವ್ಯಕ್ತಪಡಿಸಿದ್ದು, ಚಿರತೆಗೆ ಬೋನು ಇಡುವುದಾಗಿ ತಿಳಿಸಿರುತ್ತಾರೆ.  ಸುಮಾರು ಎರಡು ತಿಂಗಳ ಹಿಂದೆಯೇ ಪದ್ಮುಂಜ ಸುತ್ತಮುತ್ತಲಿನ ಪರಿಸರದಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ  ಶಂಕೆಯಿದ್ದು, ಇದೀಗ ಸಾಂತಪ್ಪ ಪೂಜಾರಿಯವರೇ ಸದೃಶ ಚಿರತೆಯಿರುವುದನ್ನು ಕಂಡಿದ್ದು,  ಗ್ರಾಮಸ್ಥರಲ್ಲಿ  ಆತಂಕ ಮೂಡಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.