ಹೊಳೆಯಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕ ಸಾವು

ನಡ ಗ್ರಾಮದ ಕುತ್ರೋಟ್ಟು ದೇವರ ಗುಂಡಿ ಎಂಬಲ್ಲಿ ಸ್ನೇಹಿತರ ಜೊತೆ ಸ್ನಾನಕ್ಕೆ ಹೋಗಿದ್ದ ಯುವಕ ಮೊಹಮ್ಮದ್ ನಬಾನ್ (20 ವ) ಅವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನ.28 ರಂದು ನಡೆದಿದೆ.

ಕುತ್ರೋಟ್ಟು ದೇವರಗುಂಡಿ ನದಿಯಲ್ಲಿ ಸ್ಥಾನ ಮಾಡಲು ಮೂವರು ಗೆಳೆಯರು ನೀರಿಗೆ ಇಳಿದಿದ್ದು. ಇದರಲ್ಲಿ ಒಬ್ಬ ನೀರಿನ ಸುಳಿಗೆ ಸಿಲುಕಿದ್ದ.
ಕೂಡಲೇ ಸ್ಥಳೀಯರ ಸಹಾಯದಿಂದ ನೀರಿನಲ್ಲಿ ಹುಡುಕಾಟ ನಡೆಸಿ ಯುವಕನನ್ನು ಮೇಲೆ ಎಳೆದು ತರಲಾಯಿತು. ಪ್ರಾಥಮಿಕ ಚಿಕಿತ್ಸೆ ಮಾಡಿದಾಗ ಉಸಿರಾಟ ನಡೆಸುತ್ತಿದ್ದು ತಕ್ಷಣ ಅಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

ಮೃತಪಟ್ಟ ಯುವಕ ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ಇಸ್ಮಾಯಿಲ್ ಎಂಬವರ ಮಗ ಎಂದು ತಿಳಿದು ಬಂದಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಶವಗಾರಕ್ಕೆ ಸಾಗಿಸಲಾಗಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.