ಮೂಡುಕೋಡಿ ದೈಪಾಲಬೆಟ್ಟ ಬ್ರಹ್ಮ ಕಲಶೋತ್ಸವ ವಿಜ್ಞಾಪಣಾ ಪತ್ರ ಬಿಡುಗಡೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

ವೇಣೂರು: ಮೂಡುಕೋಡಿಯ ದೈಪಾಲಬೆಟ್ಟ ದೈವಸ್ಥಾನದ ಬ್ರಹ್ಮ ಕಲಶೋತ್ಸವ ಪೆಬ್ರವರಿ ತಿ೦ಗಳಲ್ಲಿ ಜರಗಲಿದ್ದು ಆ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ವನ್ನು ಶಾಸಕ ಹರೀಶ್ ಪೂ೦ಜ ನ. 28 ರಂದು ನೆರವೇರಿಸಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ದೇವರ ಹಾಗೂ ದೈವದ ಕೆಲಸದ ಮೂಲಕ ಊರಿಗೆ ಸುಭೀಕ್ಷೇ ಆಗುತ್ತದೆ ಎ೦ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷರು ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ. ಮಾತನಾಡಿ ಬ್ರಹ್ಮ ಕಲಶೋತ್ಸವ ಯಶಸ್ವಿಯಾಗಿ ನಡೆಯಬೇಕಾದರೆ ಊರವರ ಸಹಕಾರ ಅತೀ ಅಗತ್ಯವಿದೆ ಎ೦ದರು. ವೇದಮೂರ್ತಿ ಶ್ರೀ ರಾಮದಾಸ ಅಸ್ರಣ್ಣರು ಮಾರೂರು ಅವರು ಧಾಮಿ೯ಕ ಪೂಜಾ ವಿಧಿ ವಿಧಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಬೆಳ್ತಂಗಡಿ ಮ೦ಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಗುತ್ತಿನ ಪ್ರಮುಖರಾದ ವಿನಯ ಕುಮಾರ್ ಸೇಮಿತ ಮಹಾವೀರ ಜೈನ್ ಟ್ರಸ್ಟಿನ ಕೋಶಾಧಿಕಾರಿ ನಮಿರಾಜ ಆರಿಗ, ಬ್ರಹ್ಮ ಕಲಶೋತ್ಸವ ಕಾರ್ಯದರ್ಶಿ ನ್ಯಾಯವಾದಿ ಸತೀಶ್ ಪಿ. ಎನ್., ಪ೦ಚಾಯತ್ ಸದಸ್ಯರುಗಳಾದ ಹರೀಶ್ ಪಿ. ಎಸ್., ಅನೂಪ್ ಜೆ. ಪಾಯಸ್, ವೀಣಾ ದೇವಾಡಿಗ, ಉಪಸ್ಥಿತರಿದ್ದರು.

ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಸು೦ದರ ಹೆಗ್ಡೆ ಬಿ.ಇ ಸ್ವಾಗತಿಸಿ, ಕೋಶಾಧಿಕಾರಿ ರಾಕೇಶ್ ಕುಮಾರ್ ವಿಜ್ಞಾಪನಾ ಪತ್ರ ವಾಚಿಸಿದರು. ಗ್ರಾಮ ಪ೦ಚಾಯತ್ ಸದಸ್ಯ ಉಮೇಶ್ ನಡ್ತಿಕಲ್ ಕಾರ್ಯಕ್ರಮ ನಿರೂಪಿಸಿ ಟ್ರಸ್ಟಿನ ಕಾರ್ಯದರ್ಶಿ ಶಶಿಧರ ಶೆಟ್ಟಿ ವ೦ದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.