ನಿವೃತ್ತ ಶಿಕ್ಷಕಿ ಸೋಮು ಆರ್ಲರವರಿಗೆ ಶ್ರದ್ಧಾಂಜಲಿ ಸಭೆ

ಧರ್ಮಸ್ಥಳ : ಇತ್ತೀಚೆಗೆ ನಿಧನರಾದ ಕನ್ಯಾಡಿ ಆರ್ಲ ದಿ.ಮಾಯಿಲ ಪೂಜಾರಿಯವರ ಪತ್ನಿ ನಿವೃತ್ತ ಶಿಕ್ಷಕಿ ಸೋಮು ರವರಿಗೆ ಶ್ರದ್ಧಾಂಜಲಿ ಸಭೆ ನ. 28 ರಂದು ಕನ್ಯಾಡಿ ಹಿ. ಪ್ರಾ. ಶಾಲಾ ವಠಾರದಲ್ಲಿ ನಡೆಯಿತು. ಸದಾನಂದ ಬಿ. ಮುಂಡಾಜೆ ನುಡಿ ನಮನ ಸಲ್ಲಿಸಿದರು.

ಮೋನಪ್ಪ ಪೂಜಾರಿ ಕಂಡೆಂತ್ಯರ್, ಕೃಷ್ಣಪ್ಪ ಗುಡಿಗಾರ್ ಶ್ರದ್ಧಾಂಜಲಿ ಅರ್ಪಿಸಿದರು. ಅವರ ಶಿಷ್ಯ ವರ್ಗ, ಹಿತೈಷಿಗಳು, ಶಾಲಾ ಶಿಕ್ಷಕರು, ಪುತ್ರ ತುಕಾರಾಮ ಸಾಲಿಯಾನ್ ಆರ್ಲ, ಪುತ್ರಿಯರಾದ ವಸಂತಿ, ಜಯಂತಿ, ಚಂದ್ರಾವತಿ, ಭಾರತಿ, ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬ ವರ್ಗದವರು ಹಾಜರಿದ್ದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.