ಯಕ್ಷಬಿಂದು ಕಲಾಕೇಂದ್ರ ಧರ್ಮಸ್ಥಳ ಘಟಕದ ಉದ್ಘಾಟನಾ ಸಮಾರಂಭ

ಉಜಿರೆಯಲ್ಲಿ ಕಳೆದ 8 ವರ್ಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯನ್ನು ಧಾರೆ ಎರೆದ ಯಕ್ಷಬಿಂದು ಕಲಾಕೇಂದ್ರ ಸಂಸ್ಥೆ ಯಕ್ಷಬಿಂದು ಕಲಾಕೇಂದ್ರ ಧರ್ಮಸ್ಥಳ ಘಟಕ ಧರ್ಮಸ್ಥಳ ಗ್ರಾಮ ಪಂಚಾಯತಿ ಸಭಾಂಗಣ ದಲ್ಲಿ ನ. 28ರಂದು ಉದ್ಘಾಟನೆಗೊಂಡಿತು.

ಯಕ್ಷಗಾನರಂಗದಲ್ಲಿ 7ದಶಕಗಳಿಂದ ಸೇವೆಗೈದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸೂರಿಕುಮೇರು ಕೆ.ಗೋವಿಂದ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಪೂಜ್ಯ ಖಾವಂದರರು ಹಾಗೂ ಹರ್ಷೇಂದ್ರ ಕುಮಾರ್ ಶುಭ ಸಂದೇಶಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಕಾರ್ಯಕ್ರಮ ಉದ್ಘಾಟಕರಾದ ಸೂರಿಕುಮೇರು ಕೆ.ಗೋವಿಂದ ಭಟ್ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷರಾದ ಜಯ ಮೋನಪ್ಪ ಗೌಡ, ಉಪಾಧ್ಯಕ್ಷರಾದ ಪಿ.ಶ್ರೀನಿವಾಸ್ ರಾವ್, ಧರ್ಮಸ್ಥಳ ಗ್ರಾ.ಪಂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ, ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಬಂಧಕರಾದ ಗಿರೀಶ್ ಹೆಗ್ಡೆ , ಹಿರಿಯ ಯಕ್ಷಗಾನ ವಿದ್ವಾಂಸರಾದ ಉಜಿರೆ ಅಶೋಕ್ ಭಟ್, ಯಕ್ಷಬಿಂದು ಸಂಸ್ಥೆಯ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ, ಯಕ್ಷ ಬಿಂದುವಿನ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಕಾರ್ಯಕ್ರಮ ಪ್ರಾಸ್ತಾವಿಕವನ್ನು ಮೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಸುಹಾಸ್ ಕುಮಾರ್ ಎಸ್ , ನಿರೂಪಣೆಯನ್ನು ಯಕ್ಷಬಿಂದು ತಂಡದ ಸದಸ್ಯೆ ಸಾಯಿಸುಮ‌ ನಾವಡ ನಡೆಸಿಕೊಟ್ಟರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.