ಉಜಿರೆ:ರತ್ನ ಮಾನಸದಲ್ಲಿ ಭತ್ತ ಕಟಾವು ಕಾರ್ಯಕ್ರಮ ಮತ್ತು ಮಕ್ಕಳಿಗೆ ಪ್ರಾತ್ಯಕ್ಷಿಕೆ

ಉಜಿರೆ: ಹಬ್ಬಗಳ ಆಚರಣೆ, ಇನ್ನಿತರ ಕಟ್ಟುಪಾಡುಗಳು, ಭತ್ತದ ಬೆಳೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ ನಡೆಸುತ್ತಿರುವ ಆಚಾರ, ವಿಚಾರಗಳು ಉತ್ತಮ ಸಂಸ್ಕೃತಿಯಾಗಿದ್ದು ಆರೋಗ್ಯದ ದೃಷ್ಠಿಯಲ್ಲಿ ಮತ್ತು ಪರಿಸರದ ದೃಷ್ಠಿಯಲ್ಲಿ ಉತ್ತಮವಾಗಿದ್ದು ಇತ್ತೀಚೆಗೆ ಅನಿವಾರ್ಯ ಸ್ಥಿತಿಯಲ್ಲಿ ಯಂತ್ರಗಳ ಮೊರೆ ಹೋಗುತ್ತಿದ್ದು ಇದರ ಜತೆಗೆ ಹಿಂದಿನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಪಾರುಪತ್ಯೆದಾರ ಲಕ್ಷ್ಮೀ ನಾರಾಯಣ ಕೆ. ಹೇಳಿದರು.
ಅವರು ನ.28ರಂದು ಉಜಿರೆಯ ರತ್ನಮಾನಸದಲ್ಲಿ ಬೆಳೆದಂತಹ ಭತ್ತದ ಕಟಾವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣದ ಜತೆಗೆ ಕೃಷಿ ಮಾಹಿತಿ ಸಿಗಬೇಕೆಂದು ಡಾ| ಹೆಗ್ಗಡೆ ಕುಟುಂಬಸ್ಥರು ರತ್ನಮಾನಸದಲ್ಲಿ ಶಿಕ್ಷಣ ಪದ್ಧತಿಯನ್ನು ಆರಂಬಿಸಿದ್ದು ಇಲ್ಲಿ ಮಕ್ಕಳಿಗೆ ಹೈನುಗಾರಿಕೆ, ಕೃಷಿ ಪದ್ಧತಿ ಮತ್ತು ಗುರುಕುಲ ಶಿಕ್ಷಣ ಪದ್ಧತಿ ಜತೆಗೆ ಶೈಕ್ಷಣಿಕ ಚಟುವಟಿಕೆಗಳು ಸಿಗುತ್ತಿರುವುದು ಇಲ್ಲಿನ ಮಕ್ಕಳ ಭಾಗ್ಯವಾಗಿದೆ.  ಇದೀಗ ಭತ್ತದ ಬೆಳೆಯನ್ನು ಮಾಡುವ ಮೂಲಕ ಮಕ್ಕಳು ಭತ್ತಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಮುಂದಿನ ಭವಿಷ್ಯಕ್ಕೆ ಇದು ದಾರಿದೀಪವಾಗಿದೆ ಎಂದರು.
ಎಸ್‌ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿ , ಕಾರ್ಯಕ್ರಮದಲ್ಲಿ ಎಸ್‌ ಡಿಎಂ ಶಿಕ್ಷಣ ಸಂಸ್ಥೆಗಳ ಲೆಕ್ಕಾಧಿಕಾರಿ ಬೇಬಿ ಕುಮಾರ್, ಮೈತ್ರಿ ನಿಲಯದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಲಲಿತಾ ಮುದ್ರಾಡಿ, ಎಸ್‌ ಡಿಎಂ ಸೆಕೆಂಡರಿ ಶಾಲೆಯ ಮುಖ್ಯೋಪಾದ್ಯಾಯ ಸದಾಶಿವ ಪೂಜಾರಿ, ಎಸ್‌ ಡಿಎಂ ಪುದುವೆಟ್ಟು ಶಾಲೆಯ ಮುಖ್ಯಶಿಕ್ಷಕ ಶೀನಪ್ಪ ಗೌಡ, ಎಸ್‌ಡಿಎಂ ಬಿಎಡ್ ಕಾಲೇಜಿನ ಪ್ರಶಿಕ್ಷಣ ವಿದ್ಯಾರ್ಥಿಗಳು, ಧ.ಗ್ರಾ ಯೋಜನೆಯ ಯಂತ್ರೋಪಕರಣ ವಿಭಾಗದ ಅಶೋಕ್ ಕುಮಾರ್, ಮೇಲ್ವಿಚಾರಕ ಹರಿಪ್ರಸಾದ್ ಉಪಸ್ಥಿತರಿದ್ದರು.
ರತ್ನಮಾನಸ ನಿಲಯದ ನಿಲಯಪಾಲಕರಾದ ಯತೀಶ್ ಬಳಂಜ ಪ್ರಸ್ತಾಪಿಸಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.