ಬೆಳ್ತಂಗಡಿಯ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ “ಪೃಥ್ವಿ ಮಹಾ ಪರ್ವ”ಯೋಜನೆ ಕೂಪನ್ ಡ್ರಾ

ಬೆಳ್ತಂಗಡಿ: ಬೆಳ್ತಂಗಡಿಯ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಅ.13 ರಿಂದ ನವೆಂಬರ್ 14 ರವರೆಗೆ  ಆಯೋಜಿಸಲಾದ “ಪೃಥ್ವಿ ಮಹಾ ಪರ್ವ” ವಿಶೇಷ ಆಫರ್ ಯೋಜನೆಯ ಅದೃಷ್ಟ ಚೀಟಿ ಡ್ರಾ ಹಾಗೂ ಗೂಡುದೀಪ ಸ್ಪರ್ಧಾ ವಿಜೇತರಿಗೆ  ಬಹುಮಾನ ವಿತರಣೆ ಕಾರ್ಯಕ್ರಮ ನ.27 ರಂದು ಜರುಗಿತು.

ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಶ್ರೀನಾಥ್, ಬೆಳ್ತಂಗಡಿ ರೋಟರಿ ಕ್ಲಬ್  ಮಾಜಿ ಅಧ್ಯಕ್ಷ  ಯಶವಂತ ಪಟವರ್ಧನ್ ಗೌರವ ಉಪಸ್ಥಿತರಿದ್ದರು. ಇದೇ ವೇಳೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಪಿ ಶ್ರೀನಾಥ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪೃಥ್ವಿ ಜ್ಯುವೆಲ್ಸ್ ಶಾಖಾ ವ್ಯವಸ್ಥಾಪಕ ಉಮಾನಾಥ ಪ್ರಭು, ಸಹ ವ್ಯವಸ್ಥಾಪಕ ಹರಿಪ್ರಸಾದ್ ಪ್ರಭು, ಸಿಬ್ಬಂದಿಗಳಾದ ಗುರುಪ್ರಸಾದ್, ಸತೀಶ್, ಕೃಷ್ಣ, ರಕ್ಷಾ, ಪ್ರಸಾದ್, ನಿಸಾರ್, ರೊನಾಲ್ಡ್ ಮೋನಿಸ್  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.