ನಾರಾವಿ: ಅವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ

ನಾರಾವಿ: ನಾರಾವಿ ಗ್ರಾಮದ ಅಂಗರಕೋಡಿ ನಿವಾಸಿ, ಅವಿವಾಹಿತ ಯುವಕನೋರ್ವ ತಮ್ಮ ಮನೆಯ ಸಮೀಪವಿರುವ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ನಾರಾವಿ ಗ್ರಾಮದ ಅಂಗರಕೋಡಿ ನಿವಾಸಿ ಲಕ್ಷ್ಮಣ ಶೆಟ್ಟಿಯವರ ಪುತ್ರ ಸಂತೋಷ್ (38.ವ) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.  ಮನೆಯಲ್ಲಿ ಕೃಷಿ ವೃತ್ತಿಯನ್ನು ನಡೆಸುತ್ತಿದ್ದ ಸಂತೋಷ್ ರವರು  ನ.26 ರಂದು ಸಂಜೆ ವೇಳೆ ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ಇವರಿಗಾಗಿ ಹುಡುಕಾಟ ನಡೆಸಿದ ವೇಳೆ  ಇಂದು(ನ.27) ಬೆಳಿಗ್ಗೆ ಮನೆಯ ಸಮೀಪವಿರುವ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.

 ಈ ಬಗ್ಗೆ ವೇಣೂರು ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕಾಗಿ  ಯುವಕ ಈ ಕೃತ್ಯವೆಸಗಿದ್ದಾರೆ ಎಂಬುವುದು ಇನ್ನಷ್ಟೇ ತನಿಖೆಯಿಂದ ತಿಳಿದುಬರಬೇಕಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.