ದೈಪಾಲಬೆಟ್ಟ ಶ್ರೀ ಕೊಡಮಣಿತ್ತಾಯ-ಬ್ರಹ್ಮಬೈದರ್ಕಳ ಸನ್ನಿಧಿ ಬ್ರಹ್ಮಕಲಶೋತ್ಸವ ವಿಜ್ಞಾಪನಾ ಪತ್ರ ಬಿಡುಗಡೆ

ಮೂಡುಕೋಡಿ: ಇಲ್ಲಿಯ ದೈಪಾಲಬೆಟ್ಟ ಶ್ರೀ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಸನ್ನಿಧಿಯ ಬ್ರಹ್ಮಕಲಶೋತ್ಸವವು ಮುಂದಿನ ವರ್ಷ ಫೆ.19 ರಿಂದ 23 ರವರೆಗೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಶ್ರೀ ದೈವ ಕ್ಷೇತ್ರದಲ್ಲಿ ಸಾನಿಧ್ಯ ಅಭಿವೃದ್ಧಿ ಧಾರ್ಮಿಕ ವಿಧಿ ವಿಧಾನ, ಬ್ರಹ್ಮಕಲಶೋತ್ಸವ ವಿಜ್ಞಾಪನಾ ಪತ್ರ ಬಿಡುಗಡೆ  ಸಮಾರಂಭ ಹಾಗೂ  ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮ ನ.28 ರಂದು ಜರುಗಲಿದೆ.

ಮಾರೂರು ಖಂಡಿಗ ವೇದಮೂರ್ತಿ ರಾಮದಾಸ ಅಸ್ರಣ್ಣರವರ ಗೌರವ ಉಪಸ್ಥಿತಿಯಲ್ಲಿ, ಶಾಸಕ ಹರೀಶ್ ಪೂಂಜರವರು ಬ್ರಹ್ಮಕಲಶೋತ್ಸವ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಿದ್ದಾರೆ.

ದೈಪಾಲಬೆಟ್ಟ ಕ್ಷೇತ್ರದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಮುಷ್ಠಿ ಕಾಣಿಕೆ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ , ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅಘೋರ ಹೋಮ, ಶ್ರೀ ವನದುರ್ಗಾ ಹೋಮ, ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದು ಶ್ರೀ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಸನ್ನಿಧಿಯ ಅಧ್ಯಕ್ಷ, ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ ಹೆಗ್ಡೆ ಯವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.