ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಜನುಮದಿನದ ಪ್ರಯುಕ್ತ ವಿಶೇಷ ದೃಶ್ಯ ಸಂಚಿಕೆ ಬಿಡುಗಡೆ

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಜನುಮದಿನದ ಪ್ರಯುಕ್ತ ಸುದ್ದಿ ಸಮೂಹ ಸಂಸ್ಥೆಗಳ ಪರವಾಗಿ ಡಾ. ಹೆಗ್ಗಡೆ ರವರ ದೃಶ್ಯ ಸಂಚಿಕೆಯನ್ನು ನ.೨೫ರಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಬಿಡುಗಡೆಗೊಳಿಸಿ, ಶುಭಹಾರೈಸಿದರು.
ಅವರು ಸುದ್ದಿ ತಂಡ ದೃಶ್ಯ ಸಂಚಿಕೆಯ ಮೂಲಕ ಹೆಗ್ಗಡೆಯವರ ಜೀವನವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಪರಮಪೂಜ್ಯರ ಜನುಮದಿನದ ಈ ದೃಶ್ಯ ಸಂಚಿಕೆಯನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಸಂದರ್ಭದಲ್ಲಿ ಖಾವಂದರಾದ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಜನುಮದಿನಕ್ಕೆ ಶುಭಹಾರೈಸುತ್ತೇನೆ. ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯಕ್ಕೆ ಮುಕುಟವಿದ್ದಂತೆ. ನಮ್ಮ ತಾಲೂಕಿನಲ್ಲಿ ಸಾಮಾಜಿಕ ಯೋಜನೆಗಳು ಆರಂಭವಾಗಿದ್ದು ನಮ್ಮ ತಾಲೂಕಿನ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದರು.
ಈ ಸಂದರ್ಭ ಸಂಸ್ಥೆಯ ಸಿಇಒ ಸಿಂಚನಾ ಊರುಬೈಲು, ವ್ಯವಸ್ಥಾಪಕರಾದ ಮಂಜುನಾಥ ರೈ, ಚಾನೆಲ್ ವ್ಯವಸ್ಥಾಪಕ ದಾಮೋದರ್ ದೊಂಡೋಲೆ,ತಾಂತ್ರಿಕ ಮುಖ್ಯಸ್ಥ ಪ್ರವೀಣ್, ಜಾಹೀರಾತು ವಿಭಾಗದ ಮುಖ್ಯಸ್ಥ ತುಕಾರಾಮ್ ಬಿ, ಹಾಗೂ ಸುದ್ದಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.