ಉಂಡೆಮನೆ ಪ್ರಶಸ್ತಿಗೆ ಉದಯಶಂಕರ ಕೆ ಆಯ್ಕೆ

ಬೆಳ್ತಂಗಡಿ: ಪ್ರತಿ ವರ್ಷದಂತೆ ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆ ಅಂಗವಾಗಿರುವ 26ನೇ ಯ ವರ್ಷದ ಪ್ರಶಸ್ತಿಯನ್ನು ಬೆಳ್ತಂಗಡಿಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಅರಸಿನಮಕ್ಕಿಯ ಉದಯಶಂಕರ ಕೆ ಆಯ್ಕೆಯಾಗಿದ್ದಾರೆ.
ಇವರು ಬಾಲ್ಯದಲ್ಲಿ ತಂದೆಯನ್ನು ಕಳಕೊಂಡರೂ ತಾಯಿಯ ರಕ್ಷಣೆ- ಮಾರ್ಗದರ್ಶನದಲ್ಲಿ ಹತ್ತನೆಯ ತರಗತಿಯಲ್ಲಿರುವಾಗಲೇ ರಾ.ಸ್ವ.ಸಂ.ದ ಸಂಪರ್ಕದಿಂದ ಸಮಾಜಸೇವೆಗಿಳಿದ ಇವರು ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವಾಚಟುವಟಿಕೆಗಳಲ್ಲಿ ವೈಯಕ್ತಿಕವಾಗಿ ಹಾಗೂ ಜೇಸಿ, ರೋಟರಿ ಮುಂತಾದ ಸಂಘ ಸಂಸ್ಥೆಗಳೊಂದಿಗೆ ತನ್ನನ್ನು ಜೋಡಿಸಿಕೊಂಡು ಭಾಗಿಯಾಗುತ್ತಿದ್ದಾರೆ. ಪರೋಪಕಾರದ ಮೂಲಕವೇ ವೈಯಕ್ತಿಕ ವರ್ಚಸ್ಸನ್ನು ಪಡಕೊಂಡ ಇವರು ಮೂಲ ಕಾರ್ಯಕರ್ತರಿಗೆ ಮಾದರಿಯಾಗಿದ್ದಾರೆ.
ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಎಲ್ಲಾ ಸಮಾಜಮುಖೀ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇವರ ಸರ್ವ ಸೇವೆಗಳನ್ನು ಗುರುತಿಸಿ ಪ್ರದಾನ ಮಾಡಲಾಗುವುದೆಂದು ಯೋಜನೆಯ ಸಂಚಾಲಕ ಉಂಡೆಮನೆ ವಿಶ್ವೇಶ್ವರ ಭಟ್ಟರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ.ಪೂ.ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಗೋಕರ್ಣ ಸಮೀಪದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಬರುವ ತಿಂಗಳು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿರುವರೆಂದು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.