ಉಜಿರೆ: ರಿಬ್ಬನ್ಸ್ ಮತ್ತು ಬಲೂನ್ಸ್ ಕೇಕ್ ಮಳಿಗೆ ಶಾಖೆ ಶುಭಾರಂಭ

ಉಜಿರೆ: ಉದ್ಯಮ ಹಾಗೂ ಉದ್ಯಮಿ ಬೆಳೆದಾಗ ಊರು ಬೆಳೆಯಲು ಸಾಧ್ಯವಿದೆ. ತಮಿಷ್ ಹೇರಾಜೆ, ತರೂಷ್ ಹೇರಾಜೆ ಹಾಗೂ ರಕ್ಷಿತ್ ಶೆಟ್ಟಿ ಮಂಗಳೂರು ಇವರ ಪಾಲುದಾರಿಕೆಯ ಸಂಸ್ಥೆ ಉಜಿರೆಯಲ್ಲಿ ಕಾರ್ಯಾರಂಭಿಸಿದೆ. ಹೊಸ ಮಾದರಿಯ ಅಂಗಡಿ ತೆರೆಯುವುದರಿಂದ ನಗರದ ಅಭಿವೃದ್ದಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ನಿವೃತ್ತ ಎಸ್.ಪಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪೀತಾಂಬರ ಹೇರಾಜೆ ಹೇಳಿದರು.
ಅವರು ನ. 24 ರಂದು ಉಜಿರೆ ಅರಿಪ್ಪಾಡಿ ಮಠ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾರಂಭಿಸಿದ ರಿಬ್ಬನ್ಸ್ ಮತ್ತು ಬಲೂನ್ಸ್ ಕೇಕ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಬೆಸ್ಟ್ ಫೌಂಡೇಶನ್ ಇದರ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ, ಶುಭಕೋರಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ಅಧ್ಯಕ್ಷ ಜಗನ್ನಾಥ ಬಂಗೇರ ಹೇರಾಜೆ, ಸಂಘದ ಉಪಾಧ್ಯಕ್ಷ ಶೇಖರ್ ಬಂಗೇರ ಹೇರಾಜೆ, ಪ್ರಮುಖರಾದ ರಾಜೇಂದ್ರ ಶೆಟ್ಟಿ ಮಂಗಳೂರು, ರಾಜೇಶ್ವರಿ ಶೆಟ್ಟಿ ಮಂಗಳೂರು, ವಿಮಲ ಜಗನ್ನಾಥ ಹೇರಾಜೆ, ಉಜಿರೆ ಹಳ್ಳಿ ಮನೆಯ ಮಾಲಕ ಪ್ರವೀಣ್ ಫೆರ್ನಾಂಡೀಸ್, ಸಚಿನ್ ಎಲ್ದಕ್ಕ, ರಿಬ್ಬನ್ಸ್ ಮತ್ತು ಬಲೂನ್ಸ್‌ನ ನಿರ್ದೇಶಕ ಶಂಕರ್ ಶೆಟ್ಟಿ, ನವದುರ್ಗಾ ಫುಡ್ ಪ್ರೋಡಕ್ಟ್ ಮ್ಯಾನೇಜಿಂಗ್ ಡೈರೆಕ್ಟರ್‌ಗುಣಪಾಲ್ ಶೆಟ್ಟಿ, ಸಂಸ್ಥೆಯ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ನಿತೇಶ್ ಶೆಟ್ಟಿ ಹಾಗೂ ಹೇರಾಜೆ ಕುಟುಂಬಸ್ಥರು, ಮಾಲಕರ ಬಂಧು ಮಿತ್ರರು ಮೊದಲಾದವರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭಕೋರಿದರು.
ಉಜಿರೆ ರಿಬ್ಬನ್ಸ್ ಮತ್ತು ಬಲೂನ್ಸ್ ಸಂಸ್ಥೆಯ ಪಾಲುದಾರರಾದ ತಮಿಷ್ ಹೇರಾಜೆ, ತರೂಷ್ ಹೇರಾಜೆ, ರಕ್ಷಿತ್ ಶೆಟ್ಟಿ ಮಂಗಳೂರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.