ಚೆಕ್ ಅಮಾನ್ಯ ಪ್ರಕರಣ ಆರೋಪಿಗೆ ಶಿಕ್ಷೆ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರಿ ಸಂಘ.ನಿ ಬೆಳ್ತಂಗಡಿ ಇಲ್ಲಿಂದ ಸಾಲ ಪಡೆದು ಮರುಪಾವತಿ ಬಾಬ್ತು ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಆರೋಪಿ ಉಜಿರೆ ನಿವಾಸಿ ಅಶೋಕ್ ಎಂಬವರಿಗೆ ಶಿಕ್ಷೆ ವಿಧಿಸಿ ಬೆಳ್ತಂಗಡಿ ಮಾನ್ಯ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಬಿ.ಕೆ.ನಾಗೇಶ್ ಮೂರ್ತಿ ತೀರ್ಪು ನೀಡಿದ್ದಾರೆ.

ಆರೋಪಿ ರೂ.10,00,720/- ನ್ನು ಪರಿಹಾರವಾಗಿ ಫಿರ್ಯಾಧಿದಾರರಿಗೆ ನೀಡಬೇಕು ತಪ್ಪಿದಲ್ಲಿ 1 ವರ್ಷ ಶಿಕ್ಷೆ ಅನುಭವಿಸುವಂತೆ ಮತ್ತು ರೂ.5000/- ವನ್ನು ದಂಡ ಪಾವತಿಸುವಂತೆ ಮತ್ತು ತಪ್ಪಿದಲ್ಲಿ 2 ತಿಂಗಳು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿರುತ್ತಾರೆ. ಫಿರ್ಯಾದಿದಾರ ಸಂಘದ ಪರವಾಗಿ ನ್ಯಾಯವಾದಿಗಳಾದ ಮನೋಹರ ಕುಮಾರ್ ಇಳಂತಿಲ ಮತ್ತು ಸಂದೀಪ್ ಡಿ ಸೋಜ ವಾದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.