ಮಡಂತ್ಯಾರು ರೋಟರಿ ಕ್ಲಬ್ ನಿಂದ ಮಚ್ಚಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಪುಸ್ತಕ ವಿತರಣೆ

ಮಚ್ಚಿನ: ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಮಚ್ಚಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಪುಸ್ತಕ ವಿತರಣಾ ಕಾರ್ಯಕ್ರಮ  ನ.20 ರಂದು ಜರುಗಿತು. ರೋಟರಿ ಕ್ಲಬ್ ಅಧ್ಯಕ್ಷ  ಕಾಂತಪ್ಪ ಗೌಡ ಹಟ್ಟತ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದರು.

ಮುಖ್ಯ ಅತಿಥಿ  ಕೊಡುಗೈದಾನಿ ನಿವೃತ್ತ ಶಿಕ್ಷಕ  ವಿಶ್ವನಾಥ ಶೆಟ್ಟಿ ಹಂಬೆಟ್ಟು  ಮಾತನಾಡಿ,  ವಿದ್ಯಾಸೇತು ಪುಸ್ತಕದ ಮಹತ್ವ ಹಾಗೂ ವಿದ್ಯಾರ್ಥಿಗಳು ಪರೀಕ್ಷೆ ಹಾಗೂ ಫಲಿತಾಂಶ ಸಮಯದಲ್ಲಿ ಹೇಗೆ ಇರಬೇಕೆಂದು ಮಾಹಿತಿ ನೀಡಿದರು.  ಕಾರ್ಯಕ್ರಮದಲ್ಲಿ ಮಡಂತ್ಯಾರು ರೋಟರಿ ಕ್ಲಬ್ ನ  ಮ್ಯಾಕ್ಸಿಮ್   ಅಲ್ಬುಕರ್ಕ್, ಬಿ.ಒ.ಡಿ. ಸದಸ್ಯರಾದ  ಟಿ. ರಾಮ್ ಭಟ್,   ಸುಧೀರ್ ಶೆಟ್ಟಿ, ಉದಯಕುಮಾರ್ ಜೈನ್,   ಟಿ .ವಿ ಶ್ರೀಧರ್ ರಾವ್,   ಹರ್ಷನಾರಾಯಣ ಶೆಟ್ಟಿ, ಶಾಲೆಯ ಶಿಕ್ಷಕರು , ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 72 ಜೊತೆ ಪುಸ್ತಕಗಳನ್ನು ವಿತರಿಸಲಾಯಿತು.

ಶಾಲೆಯ ಶಿಕ್ಷಕರಾದ ಅವಿನಾಶ್, ಯೋಗೀಶ್, ಲಾವಣ್ಯ, ಪ್ರಭಾರ ಮುಖ್ಯ ಶಿಕ್ಷಕಿ  ಲೀನಾ ಸೆರಾವೋರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  ಮ್ಯಾಕ್ಸಿಂ ಆಲ್ಬುಕರ್ಕ್  ಧನ್ಯವಾದವಿತ್ತರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.