ತೆಂಕಕಾರಂದೂರು: 9ನೇ ವರ್ಷದ ಲಕ್ಷದೀಪೋತ್ಸವ ಪಾದಯಾತ್ರೆಯ ಪ್ರಯುಕ್ತ ಪೂರ್ವಭಾವಿ ಸಭೆ

ಉಜಿರೆ: ಶ್ರೀ ಕ್ಷೇತ್ರದ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ನ.29 ರಂದು ನಡೆಯಲಿರುವ 9ನೇ ವರ್ಷದ ಲಕ್ಷದೀಪ ಪಾದಯಾತ್ರೆಯ ಪೂರ್ವಭಾವಿ ಸಭೆಯು ಗುರುವಾಯನಕೆರೆಯ ವಲಯದ ತೆಂಕಕಾರಂದೂರು ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ತಾಲೂಕು ಹಾಗೂ ವಲಯದ ಜನ ಜಾಗೃತಿ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಗಣ್ಯರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ನವಜೀವನದ ಸದಸ್ಯರು ಉಪಸ್ಥಿತರಿದ್ದು, ಈ ವರ್ಷ ಬಹಳ ವಿಜ್ರಂಭಣೆಯಿಂದ ನಡೆಯಲಿರುವ ಪಾದಯಾತ್ರೆಯಲ್ಲಿ ಸುಮಾರು 20 ಸಾವಿರ ಮೇಲ್ಪಟ್ಟು ಭಕ್ತಾದಿಗಳು ಭಾಗವಹಿಸುವ ಅಭಿಪ್ರಾಯವಿದ್ದು. ವಿವಿಧ  ಸ್ತಬ್ಧ  ಚಿತ್ರಗಳ ಪ್ರದರ್ಶನದೊಂದಿಗೆ ಶಿಸ್ತು ಭದ್ದವಾಗಿ ಭಾಗವಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ತಾಲೂಕು ಜನ ಜಾಗೃತಿ ವೇದಿಕೆ ಸದಸ್ಯ ಸಂತೋಷ ಕುಮಾರ್ ಕಾಪಿನಡ್ಕ ಪ್ರಾಸ್ತಾವಿಕ ಮಾತನಾಡಿದರು. ಪಡಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಯೋಗೀಶ್ ನಡಕ್ಕರ ರವರು ಗುರುವಾಯನಕೆರೆ ವಲಯದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಗೆ ಹೊರಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸೇವಾಪ್ರತಿನಿಧಿ ಸುಮಿತ್ರ ಪ್ರಾರ್ಥಿಸಿ, ಸದಾನಂದ ಸಾಲ್ಯಾನ್ ಬಳೆಂಜ ಸ್ವಾಗತಿಸಿ, ವಲಯ ಮೇಲ್ವಿಚಾರಕ ದಿನೇಶ್ ಕಾರ್ಯಕ್ರಮ ನಿರೂಪಿಸಿ, ಸೇವಾಪ್ರತಿನಿಧಿ ಗೀತಾಲತಾ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.