ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ ಮಲವಂತಿಗೆ ನಿವಾಸಿ ದೀಪಕ್ ರಿಗೆ ವೈದ್ಯಕೀಯ ನೆರವು

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ನಾರಾಯಣ ಗೌಡರ ಪುತ್ರ ದೀಪಕ್ ಎಂಬವರು  ದೀಪಾವಳಿ ಸಂದರ್ಭದಲ್ಲಿ ಸುಡು ಮದ್ದು ಕೈಯಲ್ಲಿ ಸಿಡಿದು ಕೈ ಗಾಯಗೊಂಡು, ಬೆನಕ  ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರಾ ಬಡತನದಲ್ಲಿರುವ ಇವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಬಿರುವೆರ್ ಕುಡ್ಲ, ಸಂಘಟನೆಯ ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ’ ತುರ್ತು ಸೇವಾ ನಿಧಿಯಿಂದ ನೀಡುವ ಮೂಲಕ ಈ ಕುಟುಂಬಕ್ಕೆ ಆಸರೆಯಾಯಿತು.

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕವು ದಾನಿಗಳ ನೆರವಿನಿಂದ ಸಂಗ್ರಹಿಸಿದ ಧನ ಸಹಾಯ ಮೊತ್ತವನ್ನು ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ  ಡಾ| ಗೋಪಾಲ ಕೃಷ್ಣ ಭಟ್ ರವರ ಮೂಲಕ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಅರುಣ್ ಕುಕ್ಕಾವು, ಹರ್ಷ ಕೋಟ್ಯಾನ್, ವಿನಯ್ ಕೆ ಗುರಿಪಲ್ಲ, ರಘುನಾಥ್ ಪೂಜಾರಿ ಗುರಿಪಲ್ಲ, ದಿವಾಕರ್ ಪೂಜಾರಿ ಗುರಿಪಲ್ಲ, ದಿನೇಶ್ ಕೋಟ್ಯಾನ್ ಮೊದಲಾದವರು  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.