ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರು ಸಂಘದ ಜಿಲ್ಲಾ ಸಮಿತಿಯ ಸಭೆ

ಬೆಳ್ತಂಗಡಿ:  ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರು ಸಂಘದ ಜಿಲ್ಲಾ ಸಮಿತಿಯ ಸಭೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರು ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ದಯಾನಂದ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಬ್ಬರ್ ಟ್ಯಾಪರ್ಸ್ ಗಳು ಕೆಲಸ ಮಾಡುವಲ್ಲಿ ಆದಷ್ಟು ರಬ್ಬರ್ ಶೀಟ್ ಮಾಡಲು ಪ್ರಯತ್ನ ಮಾಡಬೇಕು, ಕೆಲವರು ರಬ್ಬರ್ ಹಾಲನ್ನು ನೇರವಾಗಿ ಮಾರುಕಟ್ಟೆಗೆ ಮಾರಟ ಮಾಡುವುದರಿಂದ ಕೆಲವು ಕಂಪನಿಗಳಿಗೆ ರಬ್ಬರ್ ಶೀಟ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಸೀಟುಗಳನ್ನು ಆಮದು ಮಾಡಬೇಕಾಗುತ್ತದೆ. ಇದರಿಂದ ಸ್ಥಳೀಯ ನಮ್ಮ ರಬ್ಬರ್ ಧಾರಣೆ ಮುಂದಿನ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ.ಆದ್ದರಿಂದ ಆದಷ್ಟು ರಬ್ಬರ್ ಶೀಟ್ ಮಾಡಿ ಸರ್ಕಾರದ ಸಾಮ್ಯದ ಸೊಸೈಟಿಗಳಲ್ಲಿಯೇ ಮಾರಾಟ ಮಾಡುವಂತೆ ತಿಳಿಸಿದರು.

ಸಂಘದ ಉಪಪ್ರಧಾನ ಕಾರ್ಯದರ್ಶಿ ಸುರೇಶ್ ದೇವರಗುಂಡಿ ಬೈಲಾವನ್ನು ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಎಲ್ಲಾ ತಾಲೂಕಿನ ಪದಾಧಿಕಾರಿಗಳು, ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಉಪಸ್ಥಿತರಿದ್ದು, ಕನಿಷ್ಠ ವೇತನ( ಒಂದು ಮರ ಟ್ಯಾಪಿಂಗ್ ಮಾಡಿ ಹಾಲು ತೆಗೆದು ಶೀಟ್ ಮಾಡಿದರೆ ರೂ. 2.50, ಒಂದು ಮರ ಟ್ಯಾಪಿಂಗ್ ಮಾಡಿ ಹಾಲು ತೆಗೆದರೆ (ಶೀಟ್ ಮಾಡಲು ಇಲ್ಲ) ರೂ.2.00, ಬರೇ ಟ್ಯಾಪಿಂಗ್ ಮಾತ್ರ ಮಾಡುವುದಕ್ಕೆ ರೂ.1.50,ಇತರೆ ಕೆಲಸವಾದ ಸ್ಮೋಕ್ ಗೆ ಶೀಟ್ ಹಾಕಿ ಒಣಗಿಸುವುದಕ್ಕೆ ಪ್ರತಿ ಕೆಜಿಗೆ ರೂ. 4.00) ನಿಗದಿ ಮಾಡಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾಗರಾಜ್, ಖಜಾಂಜಿ ವಿ.ರಾಜ, ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರು ಸಂಘದ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಯೋಗಿಶ್, ಸಂಚಾಲಕ ಪ್ರಶಾಂತ್, ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ  ಅಚ್ಚುತಪ್ರಭು, ಬಂಟ್ವಾಳ ತಾಲೂಕು ಸಮಿತಿ  ಅಧ್ಯಕ್ಷ ಮನೋಜ್ ಕಾಡಬೆಟ್ಟು, ಸುಳ್ಯ ತಾಲೂಕು ಸಮಿತಿ  ಅಧ್ಯಕ್ಷ  ಶಶಿಕುಮಾರ್ ಮರ್ಕಂಜ, ಕಾರ್ಯದರ್ಶಿ ಸೆಲ್ವರಾಜ್ ಐವರ್ನಾಡು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಸಮಿತಿಯ ಕಾರ್ಯದರ್ಶಿ ಅಶೋಕ್ ಕಾವಳಕಟ್ಟೆ  ಸ್ವಾಗತಿಸಿ, ಭುವನೇಶ್ವರ ಕಾರಿಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.ಮನೋಜ್ ಕಾಡಬೆಟ್ಟು ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.