ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪುರುಷೋತ್ತಮ್ ರಾವ್ ಆಯ್ಕೆ

ವೇಣೂರು : ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನ. 22 ರಂದು ಜರಗಿತು.

ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯ ದೇವೇಂದ್ರ ಹೆಗ್ದೆ ಕೊಕ್ರಾಡಿ ರವರ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಮೂಡುಕೋಡಿ ಪಂಜಾಲಬೈಲು ನಿವಾಸಿ, ನಿವೃತ್ತ ಶಿಕ್ಷಕ ಹಾಗೂ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಪಿ.ಎನ್. ಪುರುಷೋತ್ತಮ ರಾವ್  ಇವರನ್ನು ಸರ್ವಾನುಮತದಿಂದ ಆಯ್ಕೆಯಾದರು.

ನೂತನ ಅಧ್ಯಕ್ಷರಿಗೆ ದೇವೇಂದ್ರ ಹೆಗ್ದೆ ಕೊಕ್ರಾಡಿಯವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಣೂರು ಗ್ರಾಮಕರಣಿಕ ಉಮೇಶ್ ರವರ ಸಮ್ಮುಖದಲ್ಲಿ  ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ  ಭಾಸ್ಕರ ಪೈ, ಸತೀಶ್ ಕೆರಿಯರ್, ಕಾರ್ತಿಕ್, ಅಣ್ಣು ಮೇಸ್ತ್ರಿ, ಚಂಪಾ, ಯಶೋಧ ಹೆಗ್ಡೆ, ಅರ್ಚಕ ಟಿ. ವಿಷ್ಣುಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.