ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ

ಬಂದಾರು: ಬಂದಾರು ಗ್ರಾಮದ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಗೋಪುರ  ನಿರ್ಮಾಣಕ್ಕೆ  ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ಅರ್ಚಕ  ಪ್ರಶಾಂತ್ ಹೊಳ್ಳರವರ  ವೈದಿಕ  ವಿಧಿ ವಿಧಾನಗಳೊಂದಿಗೆ, ಶಾಸಕ ಹರೀಶ್ ಪೂಂಜ ರವರು ಸುತ್ತಪೌಳಿಯ ಎದುರು ಗೋಪುರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ  ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಧರ್ಮದರ್ಶಿ ಆನಂದ ಗೌಡ ಮುಂಡೂರು, ಬಂದಾರು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಕೆ. ಗೌಡ, ಪದ್ಮುಂಜ ಸಿ.ಎ ಬ್ಯಾಂಕ್‌ ಉಪಾಧ್ಯಕ್ಷ ಅಶೋಕ್‌ ಗೌಡ, ಗ್ರಾ.ಪಂ ಸದಸ್ಯರಾದ ದಿನೇಶ್‌ಗೌಡ ಖಂಡಿಗ, ವಾಸ್ತುಶಿಲ್ಪಿ ಜಗದೀಶ್ ಕಾರ್ಕಳ, ಧರ್ಣಪ್ಪಗೌಡ ಅಂಡಿಲ, ಶ್ರೀಧರ ಗೌಡ ಕುಂಬುಡಂಗೆ, ನಾರಾಯಣಗೌಡ ಮುಂಡೂರು, ಜಗದೀಶ್‌ಗೌಡ, ಪ್ರಶಾಂತ ಗೌಡ ನಿರುಂಬುಡ, ಕುರಾಯ ಶ್ರೀ ಸದಾಶಿವ ದೇವಸ್ಧಾನದ ಜಾತ್ರಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ, ಧನಂಜಯ ಗೌಡ,  ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ, ತಿಮಯ್ಯ ಗೌಡ, ವಿಶ್ವನಾಥ ಗೌಡ ಪುತ್ತಿಲ, ಚಂದ್ರಹಾಸ ಗೌಡ, ಕೃಷ್ಣಪ್ಪ ಗೌಡ ನಡುಮಜಲು, ಗಿರೀಶ್‌ ಗೌಡ ಬಿ.ಕೆ ಕುಂಬುಡಂಗೆ, ಗ್ರಾಮಸ್ಥರು, ಭಕ್ತಾಧಿಗಳು  ಉಪಸ್ಧಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.