ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷತೆಗೆ ನ.21 ರಂದು ನಡೆದ ಚುನಾವಣೆಯಲ್ಲಿ ಡಾ. ಎಂ. ಪಿ. ಶ್ರೀನಾಥ್ರವರು ಭರ್ಜರಿ ಗೆಲುವು ಪಡೆದಿದ್ದಾರೆ.
ಶ್ರೀನಾಥ್ರವರು 1489 ಮತಪಡೆದಿದ್ದರೆ, ಅವರ ಪ್ರತಿಸ್ಪರ್ಧಿ ಎಂ. ಆರ್. ವಾಸುದೇವರವರು 534 ಮತ ಪಡೆದಿದ್ದಾರೆ.
ಡಾ. ಎಂ. ಪಿ. ಶ್ರೀನಾಥ್ರವರು ಬೆಳ್ತಂಗಡಿಯಲ್ಲಿ ಮತದಾನ ಕೇಂದ್ರದಲ್ಲಿ 520, ಸುಳ್ಯ 219, ಪುತ್ತೂರಿನಲ್ಲಿ 182, ಕಡಬದಲ್ಲಿ 46, ವಿಟ್ಲದಲ್ಲಿ 54 ಮೂಡಬಿದ್ರೆಯಲ್ಲಿ 28. ಕೊಕ್ಕಡದಲ್ಲಿ 152, ಮೂಲ್ಕಿಯಲ್ಲಿ 33. ಮಂಗಳೂರಿನಲ್ಲಿ 192, ಬಂಟ್ವಾಳದಲ್ಲಿ 63 ಮತ ಪಡೆದಿದ್ದಾರೆ.
ಎಂ. ಆರ್. ವಾಸುದೇವರವರು ಬೆಳ್ತಂಗಡಿಯಲ್ಲಿ ಮತದಾನ ಕೇಂದ್ರದಲ್ಲಿ 58, ಸುಳ್ಯ 24, ಪುತ್ತೂರಿನಲ್ಲಿ 47, ಕಡಬದಲ್ಲಿ 12, ವಿಟ್ಲದಲ್ಲಿ 25 ಮೂಡಬಿದ್ರೆಯಲ್ಲಿ 17. ಕೊಕ್ಕಡದಲ್ಲಿ 15 , ಮೂಲ್ಕಿಯಲ್ಲಿ 129, ಮಂಗಳೂರಿನಲ್ಲಿ 143, ಬಂಟ್ವಾಳದಲ್ಲಿ 64 ಮತ ಪಡೆದಿದ್ದಾರೆ.