ಕರಿಮಣೇಲು ಬಳಿ ಶ್ರೀತಾಳೆ ಮರವನ್ನು ಕಡಿಯಲು: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ

ವೇಣೂರು: ತೆರವುಗೊಳಿಸಲು ಉದ್ದೇಶಿಸಲಾಗಿದ್ದ ವೇಣೂರು ಸನಿಹದ ಕರಿಮಣೇಲುವಿನಲ್ಲಿದ್ದ ಬಹುಅಪರೂಪದ ಶ್ರೀತಾಳೆ ಮರಕ್ಕೆ ನ.21 ರಂದು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಮರವನ್ನು ಸಂರಕ್ಷಿಸಲಾಗಿದೆ.

ಶ್ರೀತಾಳೆ ಮರ ಹೂ ಬಿಟ್ಟರೆ ಊರಿಗೆ ಅಥವಾ ಮನೆ ಯಜಮಾನನಿಗೆ ಅನಿಷ್ಠ ಎಂಬ ನಂಬಿಕೆಯಿಂದ ವಿಧಿವಿಧಾನಗಳೊಂದಿಗೆ ಕಡಿಯಲು ಮುಹೂರ್ತ ನಿಗಧಿಯಾಗಿತ್ತು. ಇದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಎಸ್.ಎ. ಕೃಷ್ಣಯ್ಯ ಅವರು ಮೂಡಬಿದಿರೆ ಜೈನಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಈ ಮರವನ್ನು ಸಂರಕ್ಷಿಸಬೇಕು ಎಂದಿದ್ದರು. ಕರಿಮಣೇಲು ಜಾಗದ ಮಾಲಿಕರ ಜತೆಯೂ ದೂರವಾಣಿಯಲ್ಲಿ ಮಾತನಾಡಿದ್ದ ಅವರು ಮರವನ್ನು ಕಡಿಯದಿರುವಂತೆ ವಿನಂತಿಸಿದ್ದರು. ಅಲ್ಲದೇ ಶನಿವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದು ಮರವನ್ನು ಸಂರಕ್ಷಿಸುವಂತೆ ಆಗ್ರಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.