ಕೊಯ್ಯೂರು ಬಳಿ ಹಾಡು ಹಗಲೇ ಮನೆಗೆ ನುಗ್ಗಿದ ಕಳ್ಳರು: ನಗದು ಸಹಿತ ಚಿನ್ನಾಭರಣ ದೋಚಿ ಪರಾರಿ

ಕೊಯ್ಯೂರು: ಹಾಡುಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ನಗದು ಸಹಿತ,  ಸುಮಾರು 1.26 000/ ಮೌಲ್ಯದ ಚಿನ್ನಾಭರಣಗಳನ್ನು  ದೋಚಿ ಪರಾರಿಯಾದ ಘಟನೆ  ನ.17 ರಂದು ಕೊಯ್ಯೂರು ಗ್ರಾಮದ ಇಡಿಂಗಳ  ದರ್ಖಾಸು ನಿವಾಸಿ ವಿಶ್ವನಾಥ ಗೌಡ ಎಂಬವರ ಮನೆಯಲ್ಲಿ  ನಡೆದಿದೆ.

ಅಂದು ಬೆಳಿಗ್ಗೆ8.45 ರಿಂದ ಮಧ್ಯಾಹ್ನ2.00 ಗಂಟೆಯ ಸಮಯದಲ್ಲಿ  ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬದಿಯ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯ ಒಳಗಡೆ ಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ 800 ರೂ ನಗದು ಜೊತೆಗೆ  ಸುಮಾರು 42 ಗ್ರಾಂ ತೂಕದ  1,26,000/- ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೂದು ಪರಾರಿಯಾಗಿದ್ದಾರೆ ಎಂದು ವಿಶ್ವನಾಥ ಗೌಡ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ ಬೆಳ್ತಂಗಡಿ  ಠಾಣಾ ಪೊಲೀಸರು ಈ ಬಗ್ಗೆ ಠಾಣೆಯಲ್ಲಿ ಅ.ಕ 97/2021 ಕಲಂ: 454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ  ಮುಂದುವರೆದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.