ಕಾಂಗ್ರೆಸ್ ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಡಿ, ಪ್ರಧಾನ ಕಾರ್ಯದರ್ಶಿ ಜನಾರ್ಧನ ಕುಲಾಲ್ ನೇಮಕ

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾಗಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಜಗದೀಶ್ ಡಿ, ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ಧನ ಕುಲಾಲ್ ನೇಮಕಗೊಂಡಿದ್ದಾರೆ.

ಮಾಜಿ ಶಾಸಕ ಕೆ ವಸಂತ ಬಂಗೇರ, ವಿಧಾನ ಪರಿಸತ್ ಶಾಸಕ  ಕೆ ಹರೀಶ್ ಕುಮಾರ್, ಮಾಜಿ ಸಚಿವ ಕೆ ಗಂಗಾಧರ ಗೌಡ ಇವರುಗಳ ಶಿಪಾರಸ್ಸಿನ ಮೇರೆಗೆ  ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ರವರು ಇವರುಗಳನ್ನು ನೇಮಕಗೊಳಿಸಿ ಆದೇಶ ನೀಡಿದ್ದಾರೆ.

ಇನ್ನುಳಿದಂತೆ ಬೆಳ್ತಂಗಡಿ ನಗರ ಸಮಿತಿ  ಉಪಾಧ್ಯಕ್ಷರುಗಳಾಗಿ ರಾಜಶ್ರೀ ರಮಣ್, ಜೆರ್ಮಿ ಡೇಸಾ ಕೋರ್ದಂಡ, ವಿಶ್ವನಾಥ ಶೆಟ್ಟಿ ರಾಮ ನಗರ, ಮೈಕಲ್ ಲೋಬೊ ಕಲ್ಕಣಿ, ಸುಧಾಮಣಿ ಸಂಜಯನಗರ, ಖಜಾಂಚಿಯಾಗಿ ಫೆಡ್ರಿಕ್ ಪಿಂಟೊ, ಕಾರ್ಯದರ್ಶಿಗಳಾಗಿ ಹರೀಶ್ ಕೆಲ್ಲಗುತ್ತು, ಅಜೇಯ್ ಮಟ್ಲ, ಜನಾರ್ದನ ಸುಧೆಮುಗೇರು ಆಯ್ಕೆಗೊಂಡಿದ್ದಾರೆ.

ಬೆಳ್ತಂಗಡಿ ನಗರ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಸಂಚಾಲಕರುಗಳಾಗಿ ಪ್ರಸಾದ್ ಸಂಜಯ ನಗರ(ಯುವ ಕಾಂಗ್ರೆಸ್), ಹಾಜಿರ ರಫಿ ಸಂಜಯನಗರ( ಮಹಿಳಾ ಕಾಂಗ್ರೆಸ್ ಸಂಚಾಲಕಿ), ಶೇಖರ ಸುದೆಮುಗೇರು(ಸೇವಾದಳ), ಪ್ರಜ್ವಲ್ ಲೋಯಲ್ ಡಿಸೋಜ(ಎನ್.ಎಸ್.ಯು.ಐ), ಲ್ಯಾನ್ಸಿ ಎ ಪಿರೇರಾ(ಅಲ್ಪಸಂಖ್ಯಾತ), ಲಕ್ಷ್ಮಣ ಪೂಜಾರಿ ಬಿರ್ಮಜಲು( ಹಿಂದುಳಿದ ವರ್ಗ), ದಿನೇಶ್ ಸುದೆಮುಗೇರು(ಎಸ್.ಸಿ ಘಟಕ), ರಘು ಧರ್ಮಸೇನ(ಸಾಮಾಜಿಕ ಜಾಲತಾಣ), ಸತೀಶ್ ನಾಯ್ಕ( ಪ.ಪಂಗಡ), ಸತೀಶ್ ದೊಡ್ಡಮನೆ(ಕಿಸಾನ್ ಕಾಂಗ್ರೆಸ್), ಹೆರಾಲ್ಡ್ ಕಲ್ಕಣಿ(ಕಾರ್ಮಿಕ ಅಸಂಘಟಿತ), ಜಗದೀಶ್ ಕೆಲ್ಲಗುತ್ತು( ಕಾರ್ಮಿಕ ಸಂಘಟಿತ), ಮಹಮ್ಮದ್ ರಫೀ ಸಂಜಯನಗರ(ಮಾಜಿ ಸೈನಿಕರು), ಮುಸ್ತರ್ ಜಾನ್ ಮೆಹಬೂಬ್( ರಾಜೀವ ಗಾಂಧಿ ಪಂಚಾಯತ್ ರಾಜ್), ಸದಾಶಿವ ಸಂಜಯನಗರ(ಟೀಚರ್ಸ್ & ಗ್ರಾಜ್ಯುವೆಟ್), ಪಲ್ಲವಿ ಸುದೇಮುಗೇರು( ಸಹಕಾರಿ ಕಾಂಗ್ರೆಸ್) ನೇಮಕಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾಜಿ ಶಾಸಕ ಕೆ ವಸಂತ ಬಂಗೇರ, ಉಮ್ಮರ್ ಕುಂಞ ಮುಸ್ಲಿಯಾರ್ ಸಂಜಯನಗರ, ಸೇಸಪ್ಪ ಪೂಜಾರಿ ಹುಣ್ಸೆಕಟ್ಟೆ, ಬಿ.ಹೆಚ್. ಮಹಮ್ಮದ್ ಸುದೆಮುಗೇರು, ಬಿ.ಎಂ ಜಾಕೋಬ್, ರವೀಂದ್ರ ಭಟ್ ಕಲ್ಕಣಿ, ಹರಿದಾಸ್ ಕೆಲ್ಲಕೆರೆ, ಲಿಂಗಪ್ಪ ಸುದೆಮುಗೇರು, ಪ್ರೇಮಾ ದೇವಾಡಿಗ ಹುಣ್ಸೆಕಟ್ಟೆ, ಸತೀಶ್ ನಾಯ್ಕ ರೆಂಕೆದಗುತ್ತು, ವಲೇರಿಯನ್ ಡಿಸೋಜ ಗುಂಪಲಾಜೆ, ಧರ್ಣಪ್ಪ ಕರ್ಕೇರಾ, ಅಬ್ದುಲ್ ಸತ್ತರ್ ಸುದೆಮುಗೇರು, ಚಂದ್ರಶೇಖರ ಕರ್ಕೇರ ಪಳಿಕೆ, ರಮೇಶ್ ಪೂಜಾರಿ ಸುದೆ ಮುಗೇರು, ಐವನ್ ಡಿಸೋಜಾ, ಸೆಬೇಸ್ಟಿಯನ್ ಕ್ರಾಸ್ತಾ, ಮೆಹಬೂಬ್ ಸಂಜಯನಗರ, ನಾಸಿರ್ ಪಾಷಾ ಸಂಜಯನಗರ, ಅಬ್ದುಲ್ ಸಮೀರ್, ತೋಮಸ್ ಮುಡಾಯಿಗುತ್ತು, ಶ್ರೀಕೇಶ್ ಕೋಟ್ಯಾನ್, ಶಂಕರ ಹೆಗ್ಡೆ ಇವರುಗಳು ಆಯ್ಕೆಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.