ಉಜಿರೆ ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ಸೋಲಾರ್ ಡ್ರೈಯರ್ ಪ್ರಾಜೆಕ್ಟ್ ಗೆ ರಾಷ್ಟ್ರ ಪ್ರಶಸ್ತಿ

ಉಜಿರೆ: ಬೆಂಗಳೂರಿನ ಅಗಸ್ತ್ಯ ಫೌಂಡೇಶನ್‌ನ ವತಿಯಿಂದ ನಡೆದ ಅನ್ವೇಷಣಾ-2021 ರಾಷ್ಟ್ರಮಟ್ಟದ ಪ್ರಾಜೆಕ್ಟ್ ಸ್ಪರ್ಧೆ ಉಜಿರೆಯ ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ  ಕಡಿಮೆ ವೆಚ್ಚದ ಸೋಲಾರ್ ಡ್ರೈಯರ್ (Low Cost Solar Drier) ಎಂಬ ಪ್ರಾಜೆಕ್ಟ್‌ಗೆ ಬಹುಮಾನ ದೊರಕಿದೆ.

ಈ ಕೃಷಿ ಉಪಯೋಗಿ ಪ್ರಾಜೆಕ್ಟ್‌ನ್ನು ಶ್ರೀ ಧ.ಮಂ. ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಪ್ರಣವ್ ಶರ್ಮ ಮತ್ತು ಹರ್ಷ ಇವರು ಶ್ರೀ ಧ.ಮಂ. ಆಂಗ್ಲಮಾಧ್ಯಮ ಶಾಲೆಯ ಅನುಶ್ರೀ ರಾವ್ ಮತ್ತು ಎಸ್.ಡಿ.ಎಮ್ ಕನ್ನಡ ಮಾಧ್ಯಮ ಶಾಲೆಯ ಶ್ರೀಹರ್ಷ ರವರ ಸಹಯೋಗದೊಂದಿಗೆ ಪ್ರಾಧ್ಯಾಪಕ  ಡಾ. ಪ್ರೇಮ್ ಕುಮಾರ್ ರವರ ಮಾರ್ಗದರ್ಶನದಲ್ಲಿ ನಿರ್ಮಿಸಿ ಪ್ರಸ್ತುತಪಡಿಸಿದ್ದರು. ಈ ಮಾದರಿ ಬಳಸಿಕೊಂಡು ಕೃಷಿ ಉತ್ಪನ್ನಗಳನ್ನು ಸೂರ್ಯನ ಶಾಖದಲ್ಲಿ ಒಳ್ಳೆಯ ಗುಣಮಟ್ಟದೊಂದಿಗೆ ಸುಲಭ ಮತ್ತು ತ್ವರಿತ ಗತಿಯಲ್ಲಿ ಒಣಗಿಸಬಹುದಾಗಿದೆ.

 ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.