ಬಾರ್ಯದಲ್ಲಿ ಜಾಗ ವಿವಾದದಲ್ಲಿ ನಡೆದ ಹಲ್ಲೆ ಆರೋಪ ಸಾಬೀತು: ಆರೋಪಿತರಿಗೆ ಶಿಕ್ಷೆ

ಬಾರ್ಯ: ಬಾರ್ಯ ಗ್ರಾಮದ ಮನಿಲ ನಿವಾಸಿ ದಯಾನಂದರವರ ರವರ ಗದ್ದೆಯ ವಿಚಾರದಲ್ಲಿ ಸುಮಾರು ೬ ವರ್ಷಗಳ ಹಿಂದೆ ನಡೆದ ಗಲಾಟೆ ಪ್ರಕರಣದಲ್ಲಿ ಅವರ ತಾಯಿ ಮತ್ತು ಪ್ರಶಾಂತ್ ಎಂಬವರಿಗೆ ಹಲ್ಲೆ ನಡೆಸಿದ ನೆರೆಕರೆಯ ೧೯ ಮಂದಿ ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ತೀರ್ಪು ಪ್ರಕಟಿಸಿದೆ.
೨೦೧೫ರ ಜುಲೈ ೭ ರಂದು ಬಾರ್ಯ ಗ್ರಾಮದ ಮನಿಲ ನಿವಾಸಿ ದಯಾನಂದರವರ ಮನೆಯ ಹತ್ತಿರದ ಗದ್ದೆಯಲ್ಲಿ ನೆರೆಕರೆಯ ನಿವಾಸಿಗಳಾದ ಕೃಷ್ಣಪ್ಪ ಪೂಜಾರಿ, ಸುರೇಂಂದ್ರ ಪೂಜಾರಿ, ಲೀಲಾವತಿ ಎಂಬವರು ಕೆಲಸ ಮಾಡುತ್ತಿರುವುದನ್ನು ಕಂಡು ದಯಾನಂದ ರವರ ತಾಯಿ ರುಕ್ಮಿಣಿ ಮತ್ತು ಪ್ರಶಾಂತ ರವರು ಇದು ನಮಗೆ ಸೇರಿದ ಗದ್ದೆ ಅದರಲ್ಲಿ ಕೃಷಿ ಮಾಡುವುದು ಬೇಡ ಎಂದು ಆಕ್ಷೇಪವೆತ್ತಿದ್ದರು. ಇದನ್ನು ಪ್ರತಿರೋಧಿಸಿದ ಅಲ್ಲಿಯೇ ಸೇರಿದ್ದ ಕೃಷ್ಣಪ್ಪ ಪೂಜಾರಿ, ಸುರೇಂದ್ರ, ಉಮಾವತಿ, ಸಂತೋಷ್, ಸುಂದರ ಪುಜಾರಿ, ಲಲಿತಾ, ರಾಜೇಶ್ , ಅಣ್ಣು ಪುತ್ತಿಲ ,ರಮೇಶ್ ಶೆಟ್ಟಿ, ವೇದಾವತಿ, ಭರತ್, ತಿಮ್ಮಪ್ಪ ಗೌಡ, ಯಮುನ, ಪಾರ್ವತಿ, ಶೇಖರ ಗೌಡ, ಹೊನ್ನಮ್ಮ, ಲತೀಫ್ ಸಾಹೇಬ್, ರಮೇಶ್ ಪೂಜಾರಿ, ಚೆನ್ನಪ್ಪ ಬಂಗೇರ ಇವರುಗಳು ಗದ್ದೆಯ ಬಳಿ ಬರುವಾಗ ಕತ್ತಿ ದೊಡ್ಡ ಪಿಕ್ಕಾಸು ರಾಡ್‌ಗಳನ್ನು ಕೈಯಲ್ಲಿ ಹಿಡಿದಿದ್ದು, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಹಾಗೂ ರಮೇಶ್ ಪೂಜಾರಿ ಯವರು ಗದ್ದೆ ಕೆಲಸ ಮಾಡಿದರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ದಯಾನಂದರವರು ಉಪ್ಪಿನಂಗಡಿ ಪೊಲೀಸ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಆಗಿನ ಪೊಲೀಸ್ ಉಪನಿರೀಕ್ಷಕ ತಿಮ್ಮಪ್ಪ ನಾಯ್ಕರವರು ತನಿಖೆ ನಡೆಸಿ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮೊಕದ್ದಮೆಯ ವಾದ ವಿವಾದಗಳನ್ನು ಆಲಿಸಿದ ಬೆಳ್ತಂಗಡಿ ಸಿ.ಜೆ (ಹಿ.ವಿ)ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಮೂರ್ತಿ.ಕೆ ಯವರು ಆರೋಪಿತರು ಎಸಗಿರುವ ಅಪರಾಧಗಳ ಪೈಕ್ತಿ ಕಲಂ ೧೪೩,೧೪೭,೧೪೮,೫೦೪,೫೦೬,೩೨೩,೩೨೪ ರೆಃವಿ ೧೪೯ ರಡಿಯ ಅಪರಾಧವು ಸಾಬೀತಾದ ನಿಟ್ಟಿನಲ್ಲಿ ಆರೋಪಿತರನ್ನು ದೋಷಿಗಳೆಂದು ಪರಿಗಣಿ ಐಪಿಸಿ ಕಲಂ ೧೪೩,೫೦೪ ರಡಿಯ ಅಪರಾಧಕ್ಕೆ ೨ ತಿಂಗಳು, ಐಪಿಸಿ ಕಲಂ ೩೨೩ ರಡಿಯ ಅಪರಾಧಕ್ಕೆ ೩ತಿಂಗಳು, ಐಪಿಸಿ ಕಲಂ ೧೪೭,೧೪೮,೩೨೪,೫೦೬ ರಡಿಯ ಅಪರಾಧಗಳಿಗಾಗಿ ೬ ತಿಂಗಳು ಏಕಕಾಲದಲ್ಲಿ ಕಾರಾಗ್ರಹವಾಸ ಶಿಕ್ಷೆ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಬೆಳ್ತಂಗಡಿ ಸ.ಸ ಅಭಿಯೋಜಕ ದಿವ್ಯರಾಜ್ ರವರು ವಿಶೇಷ ಸರಕಾರಿ ನ್ಯಾಯವಾದಿ ಪುಷ್ಪರಾಜ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ವಾದ ಮಂಡಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.