ವೇಣೂರಿನ ಫಲ್ಗುಣಿ ನದಿಗೆ ಆಕಸ್ಮಿಕವಾಗಿ ಜಾರಿ ಬಿದ್ದ ಯುವಕ: ಮುಳುಗು ತಜ್ಞರಿಂದ ಶವದ ಪತ್ತೆ

ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ ಚಂದ್ರಶೇಖರ

ವೇಣೂರು : ಇಲ್ಲಿಯ ಜನತಾ ಕಾಲೋನಿ ನಿವಾಸಿ, ವೇಣೂರಿನ ಶ್ರೀನಿಧಿ ಎಂಟರ್ ಪ್ರೈಸಸ್ ನ ಉದ್ಯೋಗಿ ಚಂದ್ರಶೇಖರ [25.ವ] ಸ್ಥಳೀಯ ಫಲ್ಗುಣಿ ನದಿಗೆ ಆಕಸ್ಮಿಕವಾಗಿ ಜಾರಿ ಬಿದ್ದ ಘಟನೆ ಅ.27 ರಂದು ನಡೆದಿದೆ. ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳದವರ ಸೂಕ್ತ ಕಾರ್ಯಾಚರಣೆಯಿಂದ ಯುವಕನ ಶವ ಇದೀಗ ಪತ್ತೆಯಾಗಿದೆ.

ಘಟನೆ ನಡೆದ ಸ್ಥಳದಲ್ಲಿ ನೆರೆದಿರುವ ಸಾರ್ವಜನಿಕರು

ವೇಣೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ  ಪ್ರಕರಣ ದಾಖಲಾಗಿದೆ. ಈತನ ತಂದೆ ತಾಯಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಮನೆಯಲ್ಲಿ ಒಬ್ಬನೇ ವಾಸ್ತವ್ಯವಿದ್ದನು. ಈತ ಶ್ರೀನಿಧಿ ಎಂಟರ್ ಪ್ರೈಸಸ್ ನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದನು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.