ಲಾಯಿಲ ಪುತ್ರಬೈಲಿನ ಯುವತಿ ನಾಪತ್ತೆ: ತಂದೆಯಿಂದ ಪೊಲೀಸ್ ಠಾಣೆಗೆ ದೂರು

ಲಾಯಿಲ :ಇಲ್ಲಿಯ  ಪುತ್ರಬೈಲು  ಎಂಬಲ್ಲಿ ವಾಸ್ತವ್ಯವಿರುವ ಯುವತಿಯೋರ್ವಳು ಅ.25 ರಂದು ಮನೆಯಿಂದ ಹೊರಟವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಯುವತಿಯ ತಂದೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ರಾಮ ರವರ ಪುತ್ರಿ ರೇಣುಕಾ(21.ವ) ಎಂಬವರು ತಮ್ಮ ತಂದೆ-ತಾಯಿಯೊಂದಿಗೆ ವಾಸ್ತವ್ಯವಿದ್ದು, ಒಂದು ವರ್ಷಗಳಿಂದ ಬೆಳ್ತಂಗಡಿಯ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸುಮಾರು 3 ತಿಂಗಳಿನ ಹಿಂದೆ ತನ್ನ ತಾಯಿಯ  ಆರೈಕೆಗೆಂದು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದರು. ಅ.25 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ, ಮನೆಯವರಿಗೆ ಒಂದು ಮಾತೂ ತಿಳಿಸದೆ ಆಕೆ ಮನೆಯಿಂದ ಹೊರಟು ಹೋಗಿದ್ದರು.  ಮನೆಯವರು ಆಕೆಗಾಗಿ ಹುಡುಕಾಟ ನಡೆಸಿ, ಆಕೆಯ ಮೊಬೈಲ್ ಗೆ ಕರೆ ಮಾಡಿದ ಸಂದರ್ಭದಲ್ಲೂ ಆಕೆ ಪ್ರತಿಕ್ರಿಯಿಸದೇ ಇದ್ದು,  ಇತ್ತ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ಯುವತಿಯ ತಂದೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಪತ್ತೆ ಕಾರ್ಯ ಮುಂದುವರೆದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.