ಮುತ್ತೂಟ್ ಫೈನಾನ್ಸ್ ವತಿಯಿಂದ ಬೆಳ್ತಂಗಡಿ ಮಾದರಿ ಹಿ.ಪ್ರಾ.ಶಾಲೆಗೆ ಎಲ್.ಇ.ಡಿ ಟಿ.ವಿ ಹಸ್ತಾಂತರ

ಬೆಳ್ತಂಗಡಿ: ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ಕಾರಣಗಳಿಂದ ತರಗತಿಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಹಾಗಾಗಿ ಆನ್‌ಲೈನ್ ತರಗತಿಗಳು ನಡೆಯುತ್ತಿತ್ತಾದರೂ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ತರಗತಿಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೆ ಸಮಸ್ಯೆಯನ್ನು ಎದುರಿಸಿದ್ದಾರೆ. ಮುತ್ತೂಟ್ ಫೈನಾನ್ಸ್ ಈ ಕೊಡುಗೆಯಿಂದ ಇಲ್ಲಿನ ಮಕ್ಕಳಿಗೆ ವಿದ್ಯಾರ್ಜನೆಗೆ ತುಂಬಾ ಅನುಕೂಲವಾಗಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಇಂತಹ ವಿಚಾರಗಳು ಸಂಚಲನಕಾರಿ ವಿಷಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಎಸ್ ವಿರೂಪಾಕ್ಷಪ್ಪ  ಹೇಳಿದರು.
ಅವರು ಅ. 27 ರಂದು ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಶಾಖೆಯ ಎಂ ಜಾರ್ಜ್ ಫೌಂಡೇಶನ್ ವತಿಯಿಂದ ಎಲ್.ಇ.ಡಿ ಟಿವಿ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮುತ್ತೂಟ್ ಫೈನಾನ್ಸ್ ನ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.
ಮಂಗಳೂರು ವಿಭಾಗದ ಚಾರಿಟಿ ಮುಖ್ಯಸ್ಥ ಪ್ರಸಾದ್  ಮಾತನಾಡಿ, ಮುತ್ತೂಟ್ ಫೈನಾನ್ಸ್ ಹೆಸರು ಪಡೆದಿರುವುದೆ ಗೋಲ್ಡ್ ಲೋನ್‌ನಿಂದಾಗಿ. ಅದೆಷ್ಟೋ ವ್ಯವಹಾರಿಕಾ ಭಾಗಗಳು ನಮ್ಮ ಮುತ್ತೂಟ್ ಫೈನಾನ್ಸ್ ನಲ್ಲಿದೆ. ಮುತ್ತೂಟ್ ಎಂ ಜಾರ್ಜ್ ಮೂಲಕ ಸಮಾಜದಲ್ಲಿ ಅದೆಷ್ಟೋ ಸಾಮಾಜಿಕ ಮೌಲ್ಯಯುತ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಎಂದರು.
ಮುತ್ತೂಟ್ ಫೈನಾನ್ಸ್ ಡಿವಿಜನಲ್ ಮ್ಯಾನೆಜರ್ ಉದಯ ಶ್ಯಾಮ ಖಂಡಿಗೆ, ಮುತ್ತೂಟ್ ಫೈನಾನ್ಸ್ ಕ್ಲಸ್ಟರ್ ಮ್ಯಾನೆಜರ್ ಸಂದೇಶ್ ಶೆಣೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಪೈ , ಎಸ್.ಡಿ.ಎಂ.ಸಿ ಅಧ್ಯಕ್ಷ ಜಿನೇಂದ್ರ ಜೈನ್, ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗಳು, ಶಿಕ್ಷಕ ವ್ರಂದದವರು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಶಾಲಾ ಮುಖ್ಯ ಶಿಕ್ಷಕ ಸುರೇಶ್ ಸ್ವಾಗತಿಸಿ, ಶಿವರಾಂ ಬಿ. ಕಾರ್ಯಕ್ರಮ ನಿರೂಪಿಸಿದರು.  ಶಿಕ್ಷಕ ಸೂರ್ಯನಾರಾಯಣ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.