ಮುಂದಿನ ವರ್ಷ ಜನವರಿ 1ರಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಭಜನಾ ಸ್ಪರ್ಧೆ ಆರಂಭ

ಬೆಳ್ತಂಗಡಿ :ವಿಶ್ವ ಹಿಂದೂ ಪರಿಷತ್  ಬೆಳ್ತಂಗಡಿ  ಮಂಡಲ (ಬಜರಂಗದಳ , ಮಾತೃಶಕ್ತಿ, ದುರ್ಗಾವಾಹಿನಿ)  ಹಾಗೂ ಶ್ರಮಿಕ ಸೇವಾ ಟ್ರಸ್ಟ್  ನೇತೃತ್ವದಲ್ಲಿ ಮುಂದಿನ ವರ್ಷ ಜನವರಿ 1 ರಿಂದ  ಭಜನಾ ಸ್ಪರ್ಧೆ ಆರಂಭಗೊಳ್ಳಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

 ಅವರು ಅ.26 ರಂದು  ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ  ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.   ಪುರುಷರ ಕುಣಿತ ಭಜನೆಯಲ್ಲಿ ಕನಿಷ್ಟ 25 ಜನ ಪಾಲ್ಗೊಳ್ಳುವ ಅವಕಾಶವಿದ್ದು , ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಟ 25  ಮಹಿಳೆಯರು  ಹಾಗೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ  ತಂಡದಲ್ಲಿ  ಕನಿಷ್ಟ 25 ಜನ ಸ್ಪರ್ಧಿಗಳು ಭಾಗವಹಿಸಬಹುದಾಗಿದೆ.

ತಾಳ ಹಾಗೂ ತಮ್ಕಿಯನ್ನು ಹೊರತುಪಡಿಸಿ ಇನ್ನಾವುದೇ ಸಂಗೀತ ಪರಿಕರಗಳನ್ನು ಬಳಸುವಂತಿಲ್ಲ. ಒಂದು ಮಂಡಳಿಯು ಒಟ್ಟು 60 ನಿಮಿಷಗಳ ಪ್ರದರ್ಶನವನ್ನು ನೀಡಬಹುದಾಗಿದೆ (ಪುರುಷರ ಕುಣಿತ ಭಜನೆ 20 ನಿಮಿಷ, ಮಹಿಳೆಯರ ಕುಳಿತು ಮಾಡುವ ಭಜನೆಗೆ 20 ನಿಮಿಷ ಹಾಗೂ 15 ವರ್ಷದ ಕೆಳಗಿನ ಮಕ್ಕಳ ಕುಳಿತು ಮಾಡುವ ಭಜನೆ 20 ನಿಮಿಷ).

ಬೆಳ್ತಂಗಡಿ ತಾಲೂಕಿಗೆ ಸಂಭಂದಪಟ್ಟ ಭಜನಾ ತಂಡಗಳಿಗೆ ಭಾಗವಹಿಸಲು ಮಾತ್ರ ಅವಕಾಶವಿದ್ದು, ಭಜನಾ ಮಂಡಳಿಯ ಸ್ವಚ್ಚತೆ ಮತ್ತು ಅಲಂಕಾರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು. ದಾಸರ ಪದಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಭಾಗವಹಿಸುವ ಮಂಡಳಿಯು ಮೂರು ವಿಭಾಗಗಳಲ್ಲಿಯೂ ಕಡ್ಡಾಯವಾಗಿ ಭಾಗವಹಿಸುವುದು. ಸ್ಪರ್ದೆಯಲ್ಲಿ ಭಾಗವಹಿಸುವ ಮಂಡಳಿಗಳು ಮುಂಬರುವ ನ.1 ರಿಂದ ಡಿ.15ರೊಳಗಾಗಿ ತಮ್ಮ ತಂಡದ ಹೆಸರನ್ನು ನೊಂದಾಯಿಸತಕ್ಕದ್ದು.

ಜನವರಿ1 ರ ನಂತರ ಆಯೋಜಕರ ಸೂಚನೆಯಂತೆ ಸ್ಪರ್ಧೆ ಆರಂಭಗೊಳ್ಳಲಿದೆ.ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ  ರೂ.5.00 ಲಕ್ಷ , ದ್ವಿತೀಯ ಬಹುಮಾನ 2.50ಲಕ್ಷ ಹಾಗೂ ಉತ್ತಮ ಪ್ರದರ್ಶನ ನೀಡಿದ 5 ತಂಡಗಳಿಗೆ ತಲಾ 1.00 ಲಕ್ಷದಂತೆ  ನಗದು ಬಹುಮಾನವನ್ನು  ನೀಡಲಾಗುವುದು . ಸ್ಪರ್ದಾ ಆಯೋಜಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ನೊಂದಾವಣಿ ಮಾಡಲು ಇಚ್ಚಿಸುವವರು 9632863443ಈ ನಂರ‍್ಗೆ ಕರೆ ಮಾಡಿ ನೋಂದಾವಣಿ ಮಾಡಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ನವೀನ್ ನೆರಿಯ9741036849 ಹಾಗೂ ಮಂಜುನಾಥ್ ಶೆಟ್ಟಿ ನಿಡಿಗಲ್ 9448060940 ಇವರನ್ನು ಸಂಪರ್ಕಿಸಬಹುದಾಗಿದೆ ಎಂದರು

ಪತ್ರಿಕಾ ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್  ಪುತ್ತೂರು ಜಿಲ್ಲಾ ಅಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ಸಹ ಕಾರ್ಯದರ್ಶಿ ನವೀನ್ ನೆರಿಯ, ಭಜನಾ ಪರಿಷತ್ ನಿಕಟಪೂರ್ವ ಅಧ್ಯಕ್ಷ  ಮಂಜುನಾಥ್ ನಿಡಿಗಲ್ , ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.