ಬೆಳ್ತಂಗಡಿಯ ಬ್ಲಾಕ್ ವಿಂಡ್  ಸೋಲಾರ್ ಸಂಸ್ಥೆಯಲ್ಲಿ ಲಕ್ಕೀ ಡ್ರಾ ಸ್ಕೀಮ್ ಆರಂಭ

ಬೆಳ್ತಂಗಡಿ: ಬೆಳ್ತಂಗಡಿಯ ಸಂತೆಕಟ್ಟೆ ಪ್ರಜ್ವಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬ್ಲಾಕ್ ವಿಂಡ್ ಸೋಲಾರ್ ಸಂಸ್ಥೆಯು ವಿನೂತನ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ 7ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯು ‘ಲಕ್ಕೀ ಡ್ರಾ’ ಎಂಬ ಹೊಸ ಸ್ಕೀಮ್ ಆರಂಭಿಸುತ್ತಿದ್ದು, ಈ ಯೋಜನೆಯು ಅ.29ರಿಂದ ಪ್ರಾರಂಭಗೊಳ್ಳಲಿದೆ. ಬಂಪರ್ ಬಹುಮಾನವಾಗಿ ಹೀರೋ ಎಚ್.ಎಫ್ ಡಿಲಕ್ಸ್ ಬೈಕ್ ಗೆಲ್ಲಬಹುದಾಗಿದೆ ಅಲ್ಲದೆ ಈ ಯೋಜನೆಯಲ್ಲಿ ಪ್ರತಿಯೊಬ್ಬ ಸದಸ್ಯರೂ ರೂ. 300ರಂತೆ 12 ಕಂತುಗಳನ್ನು ಪಾವತಿಸಬೇಕಾಗಿದ್ದು, ಪ್ರತೀ ವಾರ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದೆ. ಡ್ರಾ ವಿಜೇತರು ಮುಂದಿನ ಕಂತು ಪಾವತಿಸಬೇಕಾಗಿಲ್ಲ.

ಪ್ರತೀ ಶನಿವಾರ ಸಂಜೆ 5 ಗಂಟೆಗೆ ಡ್ರಾ ನಡೆಯಲಿದ್ದು, ಕಂತು ಪಾವತಿಸದ ಸದಸ್ಯರ ನಂಬರನ್ನು ಡ್ರಾಗೆ ಪರಿಗಣಿಸಲಾಗುವುದಿಲ್ಲ. ಡ್ರಾ ಸಂದರ್ಭ ಸದಸ್ಯರು ಭಾಗವಹಿಸಲು ಅವಕಾಶವಿದ್ದು, ಡ್ರಾ ಫಲಿತಾಂಶವನ್ನು ಎಸ್.ಎಂ.ಎಸ್ ಹಾಗೂ ವ್ಯಾಟ್ಸ್ಆಪ್ ಮೂಲಕ ತಿಳಿಸಲಾಗುವುದು ಎಂದು ಸಂಸ್ಥೆಯ ಮಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.