ರಾಷ್ಟ್ರಮಟ್ಟದ ತ್ರೋಬಾಲ್ : ಬಂದಾರು ಗ್ರಾಮದ ಮೈರೋಳ್ತಡ್ಕ ಭರತೇಶ್ ಗೌಡ ಕರ್ನಾಟಕ ತಂಡಕ್ಕೆ ಆಯ್ಕೆ

ಬಂದಾರು: ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯಾವಳಿಯು  ಅ. 29 ರಿಂದ 31ರವರೆಗೆ ಹರಿಯಾಣ ವಿಶ್ವವಿದ್ಯಾಲಯದಲ್ಲಿ‌  ನಡೆಯಲಿದ್ದು, ಬಂದಾರು ಗ್ರಾಮದ ಮೈರೋಳ್ತಡ್ಕ ನಿವಾಸಿ ಭರತೇಶ್ ಗೌಡ ರವರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿರುವ ಇವರು, ಪ್ರಸ್ತುತ  ವಿವೇಕಾನಂದ ಕಾಲೇಜಿನಲ್ಲಿ ಅಂತಿಮ‌ ವರ್ಷದ ಬಿ.ಕಾಂ ಪದವಿ  ವ್ಯಾಸಂಗ ಮಾಡುತ್ತಿದ್ದಾರೆ. ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು  ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲೂ‌ ತ್ರೋಬಾಲ್ ನಲ್ಲಿ  ಉತ್ತಮ ಪ್ರದರ್ಶನದೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು,  ರಾಷ್ಟಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ‌ ಆಯ್ಕೆಯಾಗಿ ಊರಿಗೆ, ಹೆತ್ತವರಿಗೆ ಕೀರ್ತಿ ತಂದಿರುತ್ತಾರೆ.

ಇವರು ಬಂದಾರು ಗ್ರಾಮದ ಮೈರೋಳ್ತಡ್ಕದ ನೆಲ್ಲಿದಕಂಡ‌ ನಿವಾಸಿ ಬೊಮ್ಮಣ್ಣ ಗೌಡ ಮತ್ತು  ಚೆಲುವಮ್ಮ ದಂಪತಿ  ಪುತ್ರ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.